ಕಾಪು ಬೀಚ್ ಸ್ವಚ್ಚತಾ ಕಾರ್ಯಕ್ರಮ

Update: 2022-06-08 15:47 GMT

ಕಾಪು : ಮಾನವನ ಚಟುವಟಿಕೆಗಳಿಂದಾಗಿ ಬೀಚ್ ಮಲಿನಗೊಳ್ಳುತ್ತದೆ. ಆದರೆ ನಮ್ಮಿಂದಾಗಿ ಹಾನಿಗೊಳ್ಳುವ ಸಮುದ್ರವನ್ನು ಪ್ರಕೃತಿ, ಸಮುದ್ರ ಮತ್ತು ಪ್ರಾಣಿ ಪಕ್ಷಿಗಳು ಶುಚಿಯಾಗಿರಿಸಿಕೊಳ್ಳುವಷ್ಟು ಶಕ್ತವಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ ಹೇಳಿದರು.

ವಿಶ್ವ ಸಾಗರಗಳ ದಿನದ ಅಂಗವಾಗಿ ಕಾಪು ಪುರಸಭೆ, ಟಿಪ್ಸ್ ಸೆಷನ್ಸ್, ಕಾಪು ಬೀಚ್ ನಿರ್ವಹಣಾ ಸಮಿತಿ, ಲಾಲ್ ಬಹದ್ದೂರ್ ಶಾಸ್ತ್ರಿ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಕ್ಲಬ್ ಇವರ ಸಹಯೋಗದಲ್ಲಿ ಬುಧವಾರ ಕಾಪು ಬೀಚ್ ಸ್ವಚ್ಚತಾ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಏಕ ಬಳಕೆಯ ಪ್ಲಾಸ್ಡಿಕ್‍ಗಳಿಗೆ ಕಡಿವಾಣ ಹಾಕುವ ಮೂಲಕ ಪರಿಸರವನ್ನು ಸ್ವಚ್ಛ ಮತ್ತು ಸುಂದರವಾಗಿರಿಸಿ ಕೊಳ್ಳಲು ಸಾಧ್ಯವಿದೆ. ನಮ್ಮ ಸಂಪನ್ಮೂಲಗಳನ್ನು ವಿವೇಚನೆಯಿಂದ ಬಳಸೋಣ. ಸಾಮಾಜಿಕ ಪ್ರಜ್ಞೆ ಯೊಂದಿಗೆ ಸಮಾಜ ಮತ್ತು ನಿಸರ್ಗದೊಂದಿಗೆ ಬದುಕೋಣ ಎಂದರು.

ಕರಾವಳಿಯ ಬೀಚ್‍ಗಳಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಬೀಚ್ ಸ್ವಚ್ಚವಾಗಿದ್ದರೆ ಮಾತ್ರ ಸುಂದರತೆಯು ಶೋಭಿಸಲು ಸಾಧ್ಯವಿದೆ.  ಏಕ ಬಳಕೆಯ ಪ್ಲಾಸ್ಡಿಕ್ ಗಳಿಗೆ ಕಡಿವಾಣ ಹಾಕುವ ಮೂಲಕ ಪರಿಸರ ವನ್ನು ಸ್ವಚ್ಛ ಮತ್ತು ಸುಂದರವಾಗಿರಿಸಿಕೊಳ್ಳಲು ಸಾಧ್ಯವಿದೆ. ನಮ್ಮ ಸಂಪನ್ಮೂಲಗಳನ್ನು ವಿವೇಚನೆಯಿಂದ ಬಳಸೋಣ. ಸಾಮಾಜಿಕ ಪ್ರಜ್ಞೆ ಯೊಂದಿಗೆ ಸಮಾಜ ಮತ್ತು ನಿಸರ್ಗದೊಂದಿಗೆ ಬದುಕೋಣ ಎಂದರು.

ವಿಶ್ವಸಾಗರ ದಿನದ ಅಂಗವಾಗಿ ಸಾಂಕೇತಿಕವಾಗಿ ಕಾಪುವಿನಲ್ಲಿ ಬೀಚ್ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಾಗರ ದಿನವನ್ನು ಸಾಗರ ದಡದಲ್ಲಿ ಆಚರಿಸಿದರಷ್ಟೇ ಮಹತ್ವ ಸಿಗುತ್ತದೆ. ಅದಕ್ಕೆ ಪೂರಕವಾಗಿ ಟಿಪ್ಸ್ ಸೆಷನ್ಸ್ ಸಂಸ್ಥೆಯ ಸಹಯೋಗದೊಂದಿಗೆ ಬೀಚ್ ಸ್ಚಚ್ಚತಾ ಕಾರ್ಯಕ್ರಮವನ್ನು ಆಯೋಜಿ ಸಲಾಗಿದೆ. ಎಂದರು.

ಕಾಪು ಪುರಸಭಾ ಮುಖ್ಯಾಧಿಕಾರಿ ವೆಂಕಟೇಶ್ ನಾವಡ, ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ,  ಪುರಸಭಾ ಸದಸ್ಯರಾದ  ರತ್ನಾಕರ ಶೆಟ್ಟಿ, ನಿತಿನ್, ಸರಿತಾ ಪೂಜಾರಿ, ಶೋಭಾ ಬಂಗೇರ, ನೂರುದ್ದೀನ್, ವಿದ್ಯಲತಾ, ನವೀನ್ ಅಮೀನ್, ಟಿಪ್ಸ್ ಸಂಸ್ಥೆಯ ಶರತ್, ಜಾನ್, ರತ್ನಾಕರ್, ಸಂಪತ್, ಗಣೇಶ್, ಪುರಸಭೆ ಆರೋಗ್ಯಾಧಿಕಾರಿ ದಿನೇಶ್ ಕುಮಾರ್, ಪರಿಸರ ಎಂಜಿನಿಯರ್ ರವಿಶಂಕರ್, ಕಾಪು ಮೊಗವೀರ ಮಹಾಸಭಾದ ಅಧ್ಯಕ್ಷ ಕುಶ ಸಾಲ್ಯಾನ್, ಲಾಲ್ ಬಹದ್ದೂರ್ ಶಾಸ್ತ್ರಿ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ನ ಲಾಲಾಜಿ ಪುತ್ರನ್,   ಸಂತೋಷ್ ಶ್ರೀಯಾನ್ ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News