×
Ad

ಎಸ್ಕೆಎಸ್ಸೆಸ್ಸೆಫ್ ಕೊಲ್ನಾಡು ಶಾಖೆ ವತಿಯಿಂದ ಮಜ್ಲಿಸುನ್ನೂರ್, ಸಾಧಕರಿಗೆ ಸನ್ಮಾನ

Update: 2022-06-11 22:37 IST

ಮಂಗಳೂರು, ಜೂ. 11: ಎಸ್ಕೆಎಸ್ಸೆಸ್ಸೆಫ್ ಕೊಲ್ನಾಡು ಶಾಖೆಯ ವತಿಯಿಂದ ಮಜ್ಲಿಸುನ್ನೂರ್ ಮತ್ತು ವಿವಿಧ ಕ್ಷೇತ್ರದ ಸಾಧಕರನ್ನು ಶನಿವಾರ ಸನ್ಮಾನಿಸಿ ಗೌರವಿಸಲಾಯಿತು.

ಎಸ್ಕೆಎಸ್ಸೆಸ್ಸೆಫ್ ಮುಲ್ಕಿ ಕ್ಲಸ್ಟರ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮವನ್ನು ಶಾಫಿ ಜುಮಾ ಮಸೀದಿಯ ಖತೀಬ್ ಶರೀಫ್ ದಾರಿಮಿ ಅಲ್ ಹೈತಮಿ ದುವಾ ಮಾಡುವ ಮೂಲಕ ಉದ್ಘಾಟಿಸಿದರು.  ಬಳಿಕ ಮಜ್ಲಿಸುನ್ನೂರ್ ಕಾರ್ಯ‌ ಕ್ರಮಕ್ಕೆ ಚಾಲನೆ ನೀಡಿದರು‌.

ಮುಲ್ಕಿ ಕೊಲ್ನಾಡು ಶಾಖೆಯ ಅಧ್ಯಕ್ಷ ಯಾಸೀರ್ ಅರಾಫತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಎಸ್ಸೆಎಸ್ಸೆಸ್ಸೆಫ್ ಮುಲ್ಕಿ ಕ್ಲಸ್ಟರ್ ಅಧ್ಯಕ್ಷ ಎಂ. ಇಸ್ಮಾಯೀಲ್ , ಇಬಾದ್ ಕಾರ್ಯದರ್ಶಿ ಎಂ.ಎ. ಬಾವಾ, ಇಮ್ರಾನ್ ದಾರಿಮಿ, ಶಾಖೆಯ ಪದಾಧಿಕಾರಿಗಳು, ಗ್ರಾಮಸ್ಥರು ಉಪದ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News