×
Ad

ಪ್ರವಾದಿ ನಿಂದನೆ; ಸಂಪ್ಯ ಜುಮಾ ಮಸೀದಿ ವತಿಯಿಂದ ಪ್ರತಿಭಟನೆ

Update: 2022-06-12 09:45 IST

ಪುತ್ತೂರು : ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಬಿ.ಜೆ.ಪಿ ರಾಷ್ಟ್ರೀಯ ವಕ್ತಾರರಾದ ನೂಪುಲ್ ಶರ್ಮ ಮತ್ತು ನವೀನ್ ಜಿಂದಾಲ್ ಎಂಬವರನ್ನು ಶೀಘ್ರ ಬಂಧನಕ್ಕೆ ಒತ್ತಾಯಿಸಿ ಸಂಪ್ಯ ಮುಹಿಯುದ್ದೀನ್ ಜುಮಾ ಮಸೀದಿ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.

ಈ ಸಂದರ್ಭದಲ್ಲಿ ಮೊಅಲ್ಲಾದ ಖತೀಬ್ ಅಬ್ದುಲ್ ಹಮೀದ್ ದಾರಿಮಿ, ಜಮಾಅತ್ ಕಮಿಟಿ ಉಪಾಧ್ಯಕ್ಷರಾದ ಅಬೂಬಕ್ಕರ್ ಸಂಪ್ಯ, ಕಾರ್ಯದರ್ಶಿ ಇಸ್ಮಾಯಿಲ್ ಬೈಲಾಡಿ, ಕೋಶಾಧಿಕಾರಿ ಇಬ್ರಾಹಿಂ ಹಾಜಿ ಇಡಬೆಟ್ಟು ಹಾಗೂ ಜಮಾಅತ್ ಕಮಿಟಿ ಸದಸ್ಯರು ಮತ್ತು ಜಮಾಅತ್'ಗೊಳಪಟ್ಟ ಮೊಅಲ್ಲಾ ನಿವಾಸಿಗಳು ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News