×
Ad

ಮಂಗಳೂರು; ರೌಡಿ ಶೀಟರ್ ಕೊಲೆ ಪ್ರಕರಣ: 9 ಮಂದಿ ಸೆರೆ

Update: 2022-06-12 22:09 IST

ಮಂಗಳೂರು: ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೂ.6ರಂದು ನಡೆದ ರೌಡಿಶೀಟರ್ ರಾಘವೇಂದ್ರ ಕೊಲೆ ಪ್ರಕರಣದ ಆರೋಪಿಗಳು ಮತ್ತು ಸಹಕಾರ ನೀಡಿದವರು ಸೇರಿದಂತೆ ಒಟ್ಟು 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸುರತ್ಕಲ್ ಇಡ್ಯಾ ನಿವಾಸಿ ಸಂದೀಪ್ (45), ಕೃಷ್ಣಾಪುರದ ಸಂದೀಪ್ ದೇವಾಡಿಗ ಯಾನೆ ಸ್ಯಾಂಡಿ (32), ಸುರತ್ಕಲ್ ತಡಂಬೈಲ್ ನಿವಾಸಿ ಲಿಖಿತ್ (31), ತೋಟಬೆಂಗ್ರೆಯ ದೀಕ್ಷಿತ್ ಯಾನೆ ಕಕ್ಕೆ ದೀಕ್ಷಿತ್ (23 ) ಮೀನಕಳಿಯ ನಿವಾಸಿ ತುಷರ್ ಅಮೀನ್ ( 30), ಪಂಜಿಮೊಗರಿನ  ವಿನೋದ್ ಕುಮಾರ್ (32) ಬೈಕಂಪಾಡಿಯ ಲತೇಶ್ ಜೋಗಿ (27),  ಬೈಕಂಪಾಡಿಯ ಸಂದೀಪ್ ಪುತ್ರನ್ (36), ಮೂಡುಶೆಡ್ಡೆಯ ಅಕ್ಷಿತಾ ( 28) ಬಂಧಿತರು.

ಆರೋಪಿಗಳನ್ನು ರವಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಆರೋಪಿಗಳು ರಾಘವೇಂದ್ರ ಹತ್ಯೆಗೆ ಸಹಕರಿಸಿರುವ, ಸಂಚು ರೂಪಿಸಿರುವ, ಹಣಕಾಸಿನ ನೆರವು ನೀಡಿರುವ, ಕೊಲೆ ಕೃತ್ಯ ನಡೆಸಿದ ಬಳಿಕ ತಪ್ಪಿಸಿಕೊಳ್ಳಲು ಆಶ್ರಯ ನೀಡಿದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News