ಉಪ್ಪಿನಂಗಡಿ ರೇಂಜ್ ಮಹಾಸಭೆ ಅಧ್ಯಕ್ಷರಾಗಿ ಸೈಯದ್ ಅನಸ್ ತಂಙಳ್ ಆಯ್ಕೆ

Update: 2022-06-13 17:12 GMT
ಅನಸ್ ತಂಙಳ್

ಉಪ್ಪಿನಂಗಡಿ:  ಸಮಸ್ತ ಕೇರಳ ಜಂಇಯತ್ತುಲ್ ಮಿಅಲ್ಲಿಮೀನ್ ಉಪ್ಪಿನಂಗಡಿ ರೇಂಜ್ ನ  2022 - 23 ಸಾಲಿನ ನೂತನ ಅಧ್ಯಕ್ಷರಾಗಿ ಸೈಯದ್ ಅನಸ್ ಹಾದೀ ತಂಙಳ್ ಅಲ್ ಅಝ್ಹರಿ ಕರುವೇಲು,ಪ್ರಧಾನ ಕಾರ್ಯದರ್ಶಿ ಅಶ್ರಫ್ ಹನೀಫಿ ಉಪ್ಪಿನಂಗಡಿ ಆಯ್ಕೆಯಾಗಿದ್ದಾರೆ.

ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಉಪ್ಪಿನಂಗಡಿ ರೇಂಜ್ 2022 - 23 ನೇ  ವರ್ಷದ ವಾರ್ಷಿಕ ಮಹಾಸಭೆಯು ಉಪ್ಪಿನಂಗಡಿ ಮಾಲಿಕುದ್ದೀನಾರ್ ಕೇಂದ್ರ ಜುಮಾ ಮಸೀದಿ ಯಲ್ಲಿ ಜೂ. 11 ರಂದು ಮುಫತ್ತಿಷ್ ಉಮರ್ ದಾರಿಮಿ ಸಾಲ್ಮರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.

ಕೋಶಾಧಿಕಾರಿಯಾಗಿ ಅಬ್ದುಲ್ ರಹ್ಮಾನ್ ಹಾಜಿ ಕೊಲ್ಲೆಜಾಲ್, ಉಪಾಧ್ಯಕ್ಷರಾಗಿ ಉಸ್ಮಾನ್ ದಾರಿಮಿ ಹಳೆಗೇಟು, ಯೂಸುಫ್ ಮುಸ್ಲಿಯಾರ್ ಕೋಲ್ಪೆ, ಕಾರ್ಯದರ್ಶಿಯಾಗಿ ಕೆ. ಯಂ. ಅಬ್ದುಲ್ ಅಝೀಝ್ ಫೈಝಿ ಆದರ್ಶ ನಗರ, ಅಬ್ದುಲ್ ಹಕೀಂ ಹಾಶಿಂ ಫೈಝಿ ಮಲ್ಲಿಗೆ ಮಜಲು, ಪರೀಕ್ಷಾ ಬೋರ್ಡ್ ಚೇರ್ಮೆನ್ ಆಗಿ ಬಿ. ಟಿ. ಇಕ್ಬಾಲ್ ದಾರಿಮಿ, ವೈಸ್ ಚೇರ್ಮೆನ್ ಆಗಿ ಇಲ್ಯಾಸ್ ದಾರಿಮಿ ಅಡೆಕ್ಕಲ್, ಝಕರಿಯ್ಯಾ ಮುಸ್ಲಿಯಾರ್, ಐಟಿ ಕೋರ್ಡಿನೇಟರ್ ಆಗಿ ಕೆ. ಯಂ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್, ಯಸ್. ಕೆ. ಯಸ್. ಬಿ. ವಿ. ಚೇರ್ಮೆನ್ ತಮೀಂ ಅನ್ಸಾರಿ ಪಟ್ರಮೆ, ಕನ್ವೀನರ್ ಸಿನಾನ್ ರಹ್ಮಾನಿ ಕುದ್ಲೂರು, ರಿಲೀಫ್ ಸೆಲ್ ಚೇರ್ಮೆನ್ ಅಬ್ದುಲ್ ಲತೀಫ್ ಮುಸ್ಲಿಯಾರ್ ಬಂಡಾಡಿ, ಅಬ್ದುಲ್ ಖಾದರ್ ದಾರಿಮಿ ಬೇದ್ರೋಡಿ ಆಯ್ಕೆಯಾದರು.

ಸೈಯದ್ ಅನಸ್ ಹಾದೀ ತಂಙಳ್ ಅಲ್ ಅಝ್ಹರಿ ಕರುವೇಲು ಸಭಾ ಕಾರ್ಯಕ್ರಮ ಉದ್ಘಾಟಿಸಿದರು.  ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಅಬ್ದುಲ್ ಸಲಾಂ ಫೈಝಿ,  ಮಾಲಿಕುದ್ದೀನಾರ್ ಜುಮಾ ಮಸೀದಿ ಅಧ್ಯಕ್ಷ  ಹಾಜಿ. ಮುಸ್ತಫಾ ಕೆಂಪಿ, ಮದ್ರಸ ಮ್ಯಾನೇಜ್ ಮೆಂಟ್ ಜಿಲ್ಲಾ ಪ್ರತಿನಿಧಿ ಅಬ್ದುಲ್ ಹಮೀದ್ ಕರಾವಳಿ, ಮದ್ರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಹಾಜಿ ಕೊಲ್ಲೆಜಾಲ್, ಕಾರ್ಯದರ್ಶಿ ಯಚ್. ಯೂಸುಫ್ ಹಾಜಿ, ಮುಹಮ್ಮದ್ ಕೂಟೇಲು, ಯೂಸುಫ್ ಕೊಕ್ಕಡ ಹಾಗೂ ರೇಂಜ್ ಗೆ ಒಳಪಟ್ಟ 30 ಮದ್ರಸ ಗಳ ಅಧ್ಯಾಪಕರು ಉಪಸ್ಥಿತರಿದ್ದರು.

ಸಭೆಯಲ್ಲಿ ಪ್ರವಾದಿ ಮಹಮದ್ (ಸ.ಅ) ನಿಂದಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಿರ್ಣಯ ಅಂಗೀಕರಿಸಲಾಯಿತು.

ಅಶ್ರಫ್ ಹನೀಫಿ ಸ್ವಾಗತಿಸಿದರು. ಅಬ್ದುಲ್ ಅಝೀಝ್ ಫೈಝಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News