×
Ad

ಯುಪಿಎಸ್ಸಿಯಲ್ಲಿ ರ‍್ಯಾಂಕ್ ಪಡೆದ ಕಾರ್ಕಳದ ಮೊಹಮ್ಮದ್ ಶೌಕತ್ ಅಝೀಮ್‌ಗೆ ಸನ್ಮಾನ

Update: 2022-06-14 16:42 IST

ಕಾರ್ಕಳ : ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಕಾರ್ಕಳ ತಾಲೂಕು ಘಟಕ ವತಿಯಿಂದ ಯುಪಿಎಸ್ಸಿ ಪರೀಕ್ಷೆಯಲ್ಲಿ 545ನೇ ರ‍್ಯಾಂಕ್ ಗಳಿಸಿದ ಕಾರ್ಕಳ ಜರಿಗುಡ್ಡೆ ನಿವಾಸಿ ಮೊಹಮ್ಮದ್ ಶೌಕತ್ ಅಝೀಮ್ ಅವರನ್ನು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಮೊಹಮ್ಮದ್ ಶರೀಫ್ ಒಕ್ಕೂಟದ ಪರವಾಗಿ ಸನ್ಮಾನಿಸಿದರು.

ಈ ಸಂದರ್ಭ ಜಮೀಯ್ಯತುಲ್ ಪಲಾಹ್ ಉಡುಪಿ, ದ.ಕ. ಜಿಲ್ಲಾ ಅಧ್ಯಕ್ಷ ಸಬೀಹ್ ಅಹ್ಮದ್ ಖಾಝಿ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಉಪಾಧ್ಯಕ್ಷ ಮೊಹಮ್ಮದ್ ಗೌಸ್ ಮಿಯ್ಯಾರು, ಕಾರ್ಕಳ ಮುಸ್ಲಿಂ ಜಮಾತ್ ಅಧ್ಯಕ್ಷ ಅಶ್ಫಾಕ್ ಅಹ್ಮದ್, ಕರ್ನಾಟಕ ಮುಸ್ಲಿಂ ಜಮಾಅತ್ ಕಾರ್ಕಳ ತಾಲೂಕು ಅಧ್ಯಕ್ಷ ನಾಸಿರ್ ಶೇಖ್ ಬೈಲೂರು, ಜಮೀಯ್ಯತುಲ್ ಪಲಾಹ್ ಕಾರ್ಕಳ ತಾಲೂಕು ಅಧ್ಯಕ್ಷ ಮೊಹಮ್ಮದ್ ಯಾಕುಬ್, ಕಾರ್ಯದರ್ಶಿ ಸಯ್ಯದ್ ಹಸನ್, ಕೋಶಾಧಿಕಾರಿ ಸಮದ್ ಖಾನ್, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಕಾರ್ಕಳ ತಾಲೂಕು ಘಟಕದ ಕಾರ್ಯದರ್ಶಿ ಅಬ್ದುಲ್ ರಶೀದ್, ಕಾರ್ಕಳ ತಾಲೂಕು ಸುನ್ನಿ ಮದ್ರಸ ಮ್ಯಾನೇಜ್ಮೆಂಟ್ ಸಮಿತಿ ಅಧ್ಯಕ್ಷ ಎಚ್ ಸುಲೈಮಾನ್ ಬಜಗೋಳಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News