​ದಮಾಮ್: ಕ್ರಿಕೆಟ್ ತಂಡದ ಜರ್ಸಿ ಅನಾವರಣ

Update: 2022-06-14 15:37 GMT

ದಮಾಮ್ : ಕಾಟಿಪಳ್ಳ ಪ್ರದೇಶಗಳಲ್ಲಿ ಮೂರು ದಶಕಗಳ ಕಾಲ ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆಗೈದ ರಿಲಯನ್ಸ್ ಕಾಟಿಪಳ್ಳ ಇದೀಗ ಸೌದಿ ಅರೇಬಿಯಾದಲ್ಲೂ ಕ್ರಿಕೆಟ್ ತಂಡವನ್ನು ರಚಿಸಿದೆ. ಅದರಂತೆ ರಿಲಯನ್ಸ್ ಯೂತ್ ಅಸೊಸಿಯೇಶನ್ (ರಿ) ಕಾಟಿಪಳ್ಳ ಇದರ ಸೌದಿ ಅರೇಬಿಯಾ ಘಟಕ ‘ರಿಲಯನ್ಸ್ ಒವರ್‌ಸೀಸ್’ ವತಿಯಿಂದ ಕ್ರಿಕೆಟ್ ತಂಡದ ಜರ್ಸಿ ಅನಾವರಣ ಕಾರ್ಯಕ್ರಮವು ಇತ್ತೀಚೆಗೆ ಅಲ್‌ ಜುಬೈಲ್‌ನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಇಮ್ತಿಯಾಝ್ ಜರ್ಸಿ ಅನಾವರಣಗೊಳಿಸಿದರು. ಗೌರವಾಧ್ಯಕ್ಷ ಅಬ್ದುಲ್ ಹಮೀದ್ ಕಾರ್ಯಕ್ರಮ ಉದ್ಘಾಟಸಿದರು, ಅಲ್‌ಬಾತೀನ್ ಸಂಸ್ಥೆಯ ಮಾಲಕ ನಝೀರ್ ಎಣ್ಣೆಹೊಳೆ ಕ್ರಿಕೆಟ್ ತಂಡದ ಜರ್ಸಿಯ ಪ್ರಧಾನ ಪ್ರಾಯೋಜಕತ್ವವನ್ನು ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ಸುಹೈಲ್, ಕ್ರಿಕೆಟ್ ತಂಡದ ನಾಯಕ ಶಮೀರ್ ಅಲಿ, ವ್ಯವಸ್ಥಾಪಕ  ಝಯಾನ್, ಅಫೀಫ್, ಅಶ್ಫಾಕ್, ಸಾಹಿಲ್ ಉಪಸ್ಥಿತರಿದ್ಜರು. ಸಲಹೆಗಾರ ಸೈಫುಲ್ಲಾ ಮುಹ್ಯುದ್ದೀನ್ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಮೊಹ್ಸೀನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News