×
Ad

ಪಡುಬಿದ್ರೆ: ಮಹಿಳೆಗೆ ಕಿರುಕುಳ ಆರೋಪ; ಯುವಕ ಸೆರೆ

Update: 2022-06-14 23:09 IST

ಪಡುಬಿದ್ರೆ: ಕೂಲಿ ಕೆಲಸ ಮಾಡುವ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ, ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಯುವಕನೋರ್ವನನ್ನು ಪಡುಬಿದ್ರೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಂಚಿನಡ್ಕ ನಿವಾಸಿ ನಿಕೇಶ್ (27) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಈತ ಮಹಿಳೆಯೋರ್ವರಿಗೆ ಮೊಬೈಲ್‌ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿ ನಂತರ ಜೀವ ಬೆದರಿಕೆ ಒಡ್ಡಿರುವುದಾಗಿ ಮಹಿಳೆ ಪಡುಬಿದ್ರೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಕೊಂಡಿರುವ ಪೊಲೀಸರು ಆರೋಪಿ ನಿಕೇಶ್‌ ನನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News