ಉಮರ್ ಖಾಲಿದ್ ವಿರುದ್ಧದ ಚರ್ಚಾ ಕಾರ್ಯಕ್ರಮಗಳ ವೀಡಿಯೋ ತೆಗೆದುಹಾಕುವಂತೆ 4 ಚಾನಲ್‍ಗಳಿಗೆ ಆದೇಶ

Update: 2022-06-15 15:18 GMT
ಉಮರ್ ಖಾಲಿದ್ (PTI)

ಹೊಸದಿಲ್ಲಿ: ಈಶಾನ್ಯ ದಿಲ್ಲಿಯಲ್ಲಿ 2020ರಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಉಮರ್ ಖಾಲಿದ್ ಅವರ 'ಮಾಧ್ಯಮ ವಿಚಾರಣೆ' ನಡೆಸಲಾಗಿದೆ ಎಂದು ಆರೋಪಿಸಲಾದ ವೀಡಿಯೋಗಳನ್ನು ತೆಗೆದುಹಾಕುವಂತೆ ಇಂಡಿಯಾ ಟಿವಿ, ಆಜ್ ತಕ್, ಝೀ ನ್ಯೂಸ್ ಮತ್ತು ಝೀ ಹಿಂದುಸ್ತಾನ್  ವಾಹಿನಿಗಳಿಗೆ ರಾಷ್ಟ್ರೀಯ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ ಆದೇಶಿಸಿದೆ ಎಂದು scroll.in ವರದಿ ಮಾಡಿದೆ.

ಈ ವಾಹಿನಿಗಳು ಕೆಲವೊಂದು ಟ್ಯಾಗ್‍ಲೈನ್‍ಗಳನ್ನು ಮತ್ತು ಟಿಕ್ಕರ್ ಗಳನ್ನು ಬಳಸುವಾಗ ಸೆನ್ಸೇಶನ್ ಸೃಷ್ಟಿಸಲು ಯತ್ನಿಸಿವೆ ಎಂದು ಸಂಸ್ಥೆ ಹೇಳಿದೆ.

ಇಂದರ್‍ಜೀತ್ ಘೋರ್ಪಡೆ ಎಂಬವರು ಸಲ್ಲಿಸಿದ್ದ ದೂರಿನ ಆಧಾರದಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ದೂರಿನಲ್ಲಿ ಉಲ್ಲೇಖಿಸಲಾದ ಹೆಚ್ಚಿನ ಕಾರ್ಯಕ್ರಮಗಳು ಖಾಲಿದ್ ವಿರುದ್ಧ ಸಲ್ಲಿಸಲಾದ ಪೂರಕ ಚಾರ್ಜ್ ಶೀಟ್ ಬಗ್ಗೆ ಚರ್ಚಾ ಕಾರ್ಯಕ್ರಮಗಳಾಗಿವೆ.

ಅವರು ನೀಡಿದ ದೂರಿನಲ್ಲಿ ಝೀ ಹಿಂದುಸ್ತಾನ್ ನವೆಂಬರ್ 24, 2020ರಂದು ಪ್ರಸಾರ ಮಾಡಿದ ಕಾರ್ಯಕ್ರಮ, ಝೀ ನ್ಯೂಸ್ ನವೆಂಬರ್ 24, 2020ರಂದು ಪ್ರಸಾರ ಮಾಡಿದ "ರಿಮೋಟ್ ಕಂಟ್ರೋಲರ್ ಆಫ್ ಡೆಲ್ಲಿ ರಯಟ್ಸ್" ಕಾರ್ಯಕ್ರಮ, ಆಜ್ ತಕ್ ವಾಹಿನಿಯು ಅದೇ ದಿನ ಪ್ರಸಾರ ಮಾಡಿದ "ಕಮಾಂಡ್ ಆಫ್ ದಿ ಮೂವ್ಮೆಂಟ್ ಪ್ಲಾನ್ ಫಾರ್ ಎ ರಯಟ್", ಇಂಡಿಯಾ ಟಿವಿಯಲ್ಲಿ ನವೆಂಬರ್ 25, 2020 ರಂದು ಪ್ರಸಾರವಾದ "ಹೂ ಈಸ್ ದಿ ಮಾಸ್ಟರ್‍ಮೈಂಡ್ ಆಫ್ ಡೆಲ್ಲಿ ರಯಟ್ಸ್'' ಎಂಬ ಕಾರ್ಯಕ್ರಮದ ಕುರಿತು ಉಲ್ಲೇಖಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News