ಸಿಇಟಿ ಪರೀಕ್ಷೆ: ಜೀವಶಾಸ್ತ್ರದಲ್ಲಿ ಶೇ.80 ಗಣಿತದಲ್ಲಿ ಶೇ.96 ವಿದ್ಯಾರ್ಥಿಗಳು ಹಾಜರು

Update: 2022-06-16 16:50 GMT

ಬೆಂಗಳೂರು, ಜೂ.16: ನಾನಾ ವೃತ್ತಿಪರ ಕೋರ್ಸುಗಳಿಗೆ ನಡೆಸುತ್ತಿರುವ ಸಿಇಟಿ ಪರೀಕ್ಷೆಯ ಮೊದಲ ದಿನವಾದ ಗುರುವಾರದಂದು ಒಟ್ಟು 2,16,559 ವಿದ್ಯಾರ್ಥಿಗಳ ಪೈಕಿ ಜೀವಶಾಸ್ತ್ರದಲ್ಲಿ ಶೇ.80.95 ಮತ್ತು ಗಣಿತದಲ್ಲಿ ಶೇ.96.06ರಷ್ಟು ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ.

ಮೊದಲ ದಿನ 1,75,305 ವಿದ್ಯಾರ್ಥಿಗಳು ಜೀವಶಾಸ್ತ್ರ ಮತ್ತು 2,080,32 ವಿದ್ಯಾರ್ಥಿಗಳು ಗಣಿತ ಪರೀಕ್ಷೆ ಬರೆದಿದ್ದಾರೆ. ಎರಡನೇ ದಿನವಾದ ಶುಕ್ರವಾರ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆಗಳು ನಡೆಯಲಿವೆ. ಶನಿವಾರದಂದು ಹೊರನಾಡು ಮತ್ತು ಗಡಿನಾಡು ಕನ್ನಡ ವಿದ್ಯಾರ್ಥಿಗಳಿಗೆ ಆಯ್ದ ಆರು ಕೇಂದ್ರಗಳಲ್ಲಿ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News