ಮೊಂಟೆಪದವು ಹೆಲ್ಪ್ ಲೈನ್ ಮಹಾಸಭೆ

Update: 2022-06-18 02:50 GMT

ಮುಡಿಪು : ʼಇದು  ಔದಾರ್ಯವಲ್ಲ ನಮ್ಮ ಕರ್ತವ್ಯʼ ಎಂಬ ಘೋಷಣೆಯೊಂದಿಗೆ ಐದು ವರ್ಷಗಳಿಂದ ಬಡವರ ಮತ್ತು ಅಶಕ್ತರ ಪಾಲಿನ ಆಶಾಕಿರಣವಾಗಿ ಜನಮೆಚ್ಚುಗೆಗೆ ಪಾತ್ರವಾದ ಹೆಲ್ಪ್ ಲೈನ್  ಮೊಂಟೆಪದವು ಆರನೇ  ವರ್ಷಕ್ಕೆ ಮುನ್ನಡೆಯುತ್ತಿದೆ.

ಇದರ ಅಂಗವಾಗಿ ಮೊಂಟೆಪದವಿನ ಅಲ್ ಮದರಸತ್ತುಲ್ ಬದ್ರಿಯಾ ಹಾಲ್ ನಲ್ಲಿ  ಮಹಾಸಭೆ ನಡೆಯಿತು.  ಮೊಂಟಪದವು ಜುಮಾ ಮಸೀದಿಯ ಖತೀಬ್ ಹಾಗೂ ಹೆಲ್ಪ್ ಲೈನಿನ ಮುಖ್ಯ ಸಲಹೆಗಾರ‌ ಎಂ ಎಂ ಸಿದ್ದೀಕ್ ಸಅದಿ ಮಿತ್ತೂರು ದುಃಅ ನೆರೆವೇರಿಸಿ,  ಹೆಲ್ಪ್ ಲೈನಿನ ವಿಷಯ ಮಂಡನೆ ಮಾಡಿದರು.

ನೊಲೇಜ್ ವಿಲೇಜ್ ಮುಖ್ಯಸ್ಥರಾದ ಅಝೀಝ್ ಮೊಂಟಪದವು ಹೆಲ್ಪ್ ಲೈನ್ ನಡೆದು ಬಂದ ದಾರಿಯ ಬಗ್ಗೆ ಕಿರುಪರಿಚಯ ಮಾಡಿ ವರದಿಯನ್ನು ಮಂಡಿಸಿದರು.

ಈ ಸಂದರ್ಭ BJM ಮಸೀದಿಯ ಅಧ್ಯಕ್ಷ ಅಬ್ದುಲ್ ಖಾದರ್,  ಮಾಜಿ ಅಧ್ಯಕ್ಷ PH ಅಬ್ದುಲ್ಲಾ, ಹಿರಿಯರಾದ  ಅಹ್ಮದ್ ಕುಂಞಿ PH, ಇಸ್ಮಾಯಿಲ್, ಕುಂಞಿ ಮೋನು ಹಾಜಿ ಗುದುರು, ಮೊಹಮ್ಮದ್ ಮೊಂಟೆಪದವು ಸಭೆಯಲ್ಲಿ ಸಲಹೆಗಳನ್ನು ನೀಡಿದರು.

ಹೆಲ್ಪ್ ಲೈನ್ ಮೊಂಟೆಪದವು ಇದರ ಸ್ಥಾಪಕರಾದ ಹನೀಫ್ ಕಡಬ,  ಅಡ್ಮಿನ್ಸ್  ಹನೀಫ್ ಶೈನ್, ಸೌಕತ್ ಕತರ್, ಸಂಶುದ್ದೀನ್ UT, ಶರೀಫ್ MA, ತೌಸಿಫ್ ಗುದುರು, ಶಾಕೀರ್ MK, ಸಿರಾಜ್ ಹಾಗು ಇತರರು ಉಪಸ್ಥಿತರಿದ್ದರು.ರಝಾಕ್ ಮೊಂಟೆಪದವು ಸ್ವಾಗತಿಸಿ, ಪ್ರಾಸ್ತಾವಿಕವಾಗಿ  ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News