''ಚಾರ್ಟೆಡ್ ಅಕೌಂಟೆಂಟ್ ಆಗುವ ಆಸೆ'': ಪಿಯುಸಿ ವಾಣಿಜ್ಯ ವಿಭಾಗದಲ್ಲಿ 596 ಅಂಕ ಪಡೆದ ವಿದ್ಯಾರ್ಥಿನಿ ನೇಹಾ ಬಿ. ಆರ್

Update: 2022-06-18 12:46 GMT

ಬೆಂಗಳೂರು: 2021- 2022ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 

ವಾಣಿಜ್ಯ ವಿಭಾಗದಲ್ಲಿ 10 ಮಂದಿ ವಿದ್ಯಾರ್ಥಿಗಳು ಟಾಪರ್ ಲಿಸ್ಟ್ ನಲ್ಲಿದ್ದು, 596 ಅಂಕ ಪಡೆಯುವ ಮೂಲಕ ಉತ್ತಮ ಸಾಧನೆಗೈದ ಚಿಕ್ಕಬಳ್ಳಾಪುರದ ಅಗಲಗುರ್ಕಿಯ ಎಸ್. ಬಿ.ಜಿ.ಎನ್.ಎಸ್ (SBGNS) ಗ್ರಾಮೀಣ ಕಾಲೇಜಿನ ವಿದ್ಯಾರ್ಥಿನಿ ನೇಹಾ ಬಿ. ಆರ್ 'ವಾರ್ತಾಭಾರತಿಯೊಂದಿ'ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 

'596 ಅಂಕ ಬರಬಹುದೆಂದು ನಿರೀಕ್ಷಿಸಿರಲಿಲ್ಲ, ಆದ್ದರಿಂದ ಇದು ಅನಿರೀಕ್ಷಿತವಾಗಿದ್ದು, ಫಲಿತಾಂಶದಿಂದ ತುಂಬಾ ಖುಷಿ ಆಗ್ತಿದೆ' ಎಂದು ರಾಮಸ್ವಾಮಿ ಹಾಗೂ ಅನ್ನಪೂರ್ಣ ದಂಪತಿಯ ಪುತ್ರಿ  ನೇಹಾ ಸಂತಸ ವ್ಯಕ್ತಪಡಿಸಿದರು. 

'ಕಠಿಣ ಪರಿಶ್ರಮದಿಂದ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ. ನನ್ನ ತಂದೆ, ತಾಯಿ ಮತ್ತು ಅಣ್ಣ ನನ್ನೆಲ್ಲ ಪ್ರಯತ್ನಗಳಿಗೆ ಜೊತೆಯಾಗಿದ್ದರು. ಪರೀಕ್ಷೆ ತಯಾರಿಗೆ ನಾನು ಶಾಲೆಗೆ ಬೇಳಗ್ಗೆ ಬೇಗ ಹೋಗಬೇಕಾಗಿತ್ತು. ಈ ವೇಳೆ ನನ್ನ ತಂದೆ ಬೈಕ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಅಲ್ಲದೇ ಎಲ್ಲ ರೀತಿಯ ಸಪೋರ್ಟ್ ಮಾಡುತ್ತಿದ್ದರು' ಎಂದು ವಿವರಿಸಿದರು. 

ಇನ್ನು 596 ಅಂಕ ಪಡೆದ ನೇಹಾ ಚಾರ್ಟೆಡ್ ಅಕೌಂಟೆಂಟ್ ಆಗುವ ಬಯಕೆ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News