ದೇಶ ಕಾಯುವ ಸೈನಿಕರನ್ನು ಆರ್ಥಿಕ ಹೊರೆ ಎಂದು ಪರಿಗಣಿಸಿದ ಕೇಂದ್ರ ಸರಕಾರ: ಯು.ಟಿ.ಖಾದರ್
ಮಂಗಳೂರು: ತಮ್ಮ ಪ್ರಾಣವನ್ನು ಪಣವಾಗಿಟ್ಟು ದೇಶವನ್ನು ಕಾಯುವ ಸೈನಿಕರಿಗೆ ನೀಡುವ ವೇತನ ಸೌಲಭ್ಯ ಗಳನ್ನು ಆರ್ಥಿಕ ಹೊರೆ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪರಿಗಣಿಸಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಈ ರೀತಿ ಪರಿಗಣಿಸಿರುವುದು ಪ್ರಥಮ ಎಂದು ಶಾಸಕ ಹಾಗೂ ವಿಧಾನಸಭಾ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಸೈನ್ಯದ ವೆಚ್ಚ ವನ್ನು ಕಡಿಮೆ ಮಾಡಲು ಗುತ್ತಿಗೆ ಆಧಾರದಲ್ಲಿ ಸೈನಿಕರನ್ನು ನೇಮಕ ಮಾಡಲು ಹಮ್ಮಿಕೊಂಡಿರುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಅಗ್ನಿಪಥ್ ಯೋಜನೆಯನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು. ಈ ಹಿಂದೆ ದೇಶದ ರೈತರನ್ನು ಇದೇ ರೀತಿ ಪರಿಗಣಿಸಿ ರೈತರ ಆಕ್ರೋಶಕ್ಕೆ ಕೇಂದ್ರ ಸರ್ಕಾರ ಕಾರಣವಾಗಿದೆ. ಇದೀಗ ದೇಶದ ಯುವ ಜನರ ಆಕ್ರೋಶಕ್ಕೆ ಗುರಿಯಾಗಿದೆ. ಇದು ದೇಶದ ಪ್ರಶ್ನೆ. ಹುತಾತ್ಮರಾದ ಸೈನಿಕರ ಹೆಸರಿನಲ್ಲಿ ರಾಜಕೀಯ ಮಾಡುತ್ತಾ ಅಧಿಕಾರ ಪಡೆದ ಬಿಜೆಪಿ ಈಗ ಸೇನೆಯನ್ನು ಹೊರೆಯಾಗಿ ಪರಿಗಣಿಸಿ. ಇದಕ್ಕಾಗಿ ಬಿಜೆಪಿ ನಾಲ್ಕು ವರ್ಷಗಳ ಬಳಿಕ ಸೈನಿಕರನ್ನು ಮನೆಗೆ ಕಳುಹಿಸುತ್ತಿದೆ. ಕೇಂದ್ರ ಸರಕಾರ ಜನರ ಬದುಕಿನ ಜೊತೆ ಚೆಲ್ಲಾಟವಾಡಲು ಹೊರಟಿದೆ. ಯುವಕರಿಗೆ ವಾರ್ಷಿಕ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಭರವಸೆ ನೀಡಿದ ಮೋದಿ ನೇತೃತ್ವದ ಕೇಂದ್ರ ಸರಕಾರ ಸೇನೆಗೆ ಸೇರುವ ಯುವಜನರ ಭವಿಷ್ಯ ವನ್ನು ಅಗ್ನಿಪಥ್ ಯೋಜನೆ ಯ ಮೂಲಕ ಅತಂತ್ರ ಗೊಳಿಸಲು ಹೊರಟಿದೆ. ಈ ಯೋಜನೆ ಜಾರಿ ಮಾಡುವ ಮೊದಲು ಸೇನೆಯ ಮುಖ್ಯಸ್ಥರು, ಹಿರಿಯ ಸೇನಾಧಿಕಾರಿಗಳಾಗಿ ಸೇವೆ ಸಲ್ಲಿಸಿದವರ ಜೊತೆ ಸಮಾಲೋಚನೆ ನಡೆಸದೆ ಇರುವುದು ಆಶ್ಚರ್ಯ ವನ್ನುಂಟು ಮಾಡುತ್ತಿದೆ. ಇಸ್ರೇಲ್ ದೇಶದ ಪರಿಸ್ಥಿತಿ ಭಾರತಕ್ಕಿಂತ ಭಿನ್ನ ವಾಗಿದೆ.ಆ ದೇಶದ ಮಾದರಿ ಯನ್ನು ಇಲ್ಲಿ ಗೆ ಪರಿಗಣಿಸುವುದು ಸರಿಯಲ್ಲ. ಈ ಯೋಜನೆ ಯಿಂದ ದೇಶಾದ್ಯಂತ ಯುವಕರು ತಮ್ಮ ಆಕ್ರೋಶ ವನ್ನು ವ್ಯಕ್ತ ಪಡಿಸುತ್ತಿದ್ದಾರೆ ಈ ಯೋಜನೆ ಯನ್ನು ಕಾಂಗ್ರೆಸ್ ಕೂಡಾ ವಿರೋಧಿ ಸುತ್ತದೆ. ಅಗ್ನಿ ಪಥ್ ಮೂಲಕ ಯುವ ಜನರನ್ನು ಶಿಕ್ಷಣ ಮತ್ತು ಉದ್ಯೋಗ ಎರಡರಿಂದಲೂ ವಂಚಿಸಲು ಕೇಂದ್ರ ಸರ್ಕಾರ ಹೊರಟಿದೆ ಎಂದು ಯು.ಟಿ. ಖಾದರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ದ.ಕ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಪದಾಧಿಕಾರಿಗಳಾದ ಸಂತೋಷ್ ಕುಮಾರ್ ಶೆಟ್ಟಿ, ಟಿ.ಕೆ.ಸುಧೀರ್, ಅಪ್ಪಿ, ಅಶೋಕ್, ಮುಸ್ತಾಫ, ಫಯಾಝ್, ಜೇಮ್ಸ್ ಮೊದಲಾದ ವರು ಉಪಸ್ಥಿತ ರಿದ್ದರು.