ದ್ವಿತೀಯ ಪಿಯುಸಿ ಫಲಿತಾಂಶ: ರೇಶನ್ ಎವೆಲಿನಿಯಾ ರೋಡ್ರಿಗಸ್ ಗೆ 550 ಅಂಕ
Update: 2022-06-19 22:02 IST
ಮಂಗಳೂರು : ಪೊಂಪೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ರೇಶನ್ ಎವೆಲಿನಿಯಾ ರೋಡ್ರಿಗಸ್ ಅವರು ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 550 ಅಂಕಗಳನ್ನು ಪಡೆಯುವ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರು ಬಲ್ಕುಂಜೆ ಪಾರಿಸ್ ವ್ಯಾಪ್ತಿಯ ವಿಲ್ಸನ್ ರೋಡ್ರಿಗಸ್ ಮತ್ತು ಫ್ರೀಡಾ ರೋಡ್ರಿಗಸ್ ಅವರ ಪುತ್ರಿ.
ಇಂಗ್ಲಿಷ್ ನಲ್ಲಿ 93, ಹಿಂದಿಯಲ್ಲಿ 90, ಬ್ಯುಸ್ ನೆಸ್ ಸ್ಟಡೀಸ್ ನಲ್ಲಿ 92, ಅಕೌಂಟೆನ್ಸಿಯಲ್ಲಿ 97, ಸ್ಟಾಟಿಟಿಕ್ಸ್ ನಲ್ಲಿ 88, ಕಂಪ್ಯೂಟರ್ ಸೈನ್ಸ್ ನಲ್ಲಿ 90 ಸೇರಿ ಒಟ್ಟು 550 ಅಂಕಗಳನ್ನು ಪಡೆದುಕೊಂಡು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.