ದ್ವಿತೀಯ ಪಿಯುಸಿ ಫಲಿತಾಂಶ: ರೀವನ್ ಡಿಮೆಲ್ಲೋಗೆ 591 ಅಂಕ
Update: 2022-06-19 22:05 IST
ಮಂಗಳೂರು : ನಗರದ ಅಲೋಶಿಯಸ್ ಕಾಲೇಜ್ ವಿದ್ಯಾರ್ಥಿ ರೀವನ್ ಡಿಮೆಲ್ಲೋ ಅವರು ಈ ಸಾಲಿನ ದ್ವಿತೀಯ ಪಿಯುಸಿಯಲ್ಲಿ 591 ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರು ಇಂಗ್ಲಿಷ್‌ನಲ್ಲಿ 93, ಪ್ರಂಚ್ ಭಾಷೆಯಲ್ಲಿ 98 ಹಾಗೂ ಫಿಝಿಕ್ಸ್, ಕೆಮಿಸ್ಟ್ರೀ, ಮ್ಯಾಥಮಾಟಿಕ್ಸ್ ಮತ್ತು ಕಂಪ್ಯೂಟರ್ ಸೈನ್ಸ್ ನಲ್ಲಿ ತಲಾ 100 ಅಂಕಗಳನ್ನು ಪಡೆದಿದ್ದು, ಒಟ್ಟು 591 ಅಂಕಗಳನ್ನು ಪಡೆದುಕೊಂಡು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರು ಬಳ್ಕುಂಜೆ ನಿವಾಸಿಗಳಾದ ವಾಲ್ಟರ್ ಡಿಮೆಲ್ಲೊ ಮತ್ತು ರೀನಾ ಡಿಮೆಲ್ಲೊ ದಂಪತಿಯ ಪುತ್ತರಾಗಿದ್ದಾರೆ.