ಜೂ. 23ರಿಂದ ಜಿ.ಅರ್. ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಉಚಿತ ತಪಾಸಣೆ ಶಿಬಿರ

Update: 2022-06-20 11:03 GMT

ಮಂಗಳೂರು : ಜೂ. 23ರಿಂದ ಜಿ.ಅರ್. ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಉಚಿತ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಇದೀಗ ಆಸ್ಪತ್ರೆಯು, ಹೊರರೋಗಿ ವಿಭಾಗದಲ್ಲಿ ರಕ್ತದೊತ್ತಡ (ಬಿ.ಪಿ.) ಮತ್ತು ಮಧುಮೇಹ (ಡಯಾಬಿಟಿಸ್) ಉಚಿತ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದೆ. 

ಶಿಬಿರವು ಜೂನ್  23, 24 ಮತ್ತು 25ರ ಬೆಳಗ್ಗೆ 9 ರಿಂದ 12 ಗಂಟೆಯವರೆಗೆ ನಡೆಯಲಿದೆ. ಶಿಬಿರಾರ್ಥಿಗಳಿಗೆ ನೋಂದಾವಣೆ, ಸಕ್ಕರೆ ರಕ್ತಪರೀಕ್ಷೆ, ಇ.ಸಿ.ಜಿ. ಮತ್ತು ನುರಿತ ವೈದ್ಯರೊಡನೆ ಸಮಾಲೋಚನೆ ಲಭ್ಯವಿದೆ. ಡಾ. ರಾಮ್ ಪ್ರಕಾಶ್ ಎಮ್.ಡಿ., ಸಿನಿಯರ್ ಪಿಸಿಶಿಯನ್ ಮತ್ತು ಡಾ. ರಾಜೇಶ್ ವರದ್ ಎಮ್.ಡಿ., ಪಿಸಿಶಿಯನ್, ಸಮಾಲೋಚನೆಗೆ ಲಭ್ಯರಿರುವರು.

1996ರಲ್ಲಿ ಉದ್ಯಮಿ ಹಾಗೂ ಶಿಕ್ಷಣತಜ್ಞರಾದ ಎಸ್. ಗಣೇಶ್ ರಾವ್ ಅವರು ಪ್ರಾರoಭಿಸಿದ ಈ ಟ್ರಸ್ಟ್, ಎರಡು ದಶಕಗಳಿಂದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ನಿರ್ವಹಿಸುತ್ತಿದೆ.

ಯಾರು ಭಾಗವಹಿಸಬಹುದು?

40 ವರ್ಷ ಮೇಲ್ಪಟ್ಟ ಎಲ್ಲರೂ; ರಕ್ತದೊತ್ತಡ ಇರುವವರು / ಕುಟುಂಬದಲ್ಲಿ ರಕ್ತದೊತ್ತಡವಿದ್ದಲ್ಲಿ; ಮಧುಮೇಹ ಇರುವವರು / ಕುಟುಂಬದಲ್ಲಿ ಮಧುಮೇಹವಿದ್ದಲ್ಲಿ. ಆಸಕ್ತರು 0824 2988375ಗೆ ಕರೆಮಾಡಿ ಹೆಸರು ನೊಂದಾಯಿಸಲು ಜಿ.ಅರ್. ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಡೀನ್ ಮತ್ತು ನಿರ್ದೇಶಕರಾದ ಡಾ. ಶ್ರೀಷ ಖಂಡಿಗೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News