ಮಿಲ್ಲತ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಲೈಸನ್ಸ್ ರದ್ದಾಗಿಲ್ಲ: ಅಧ್ಯಕ್ಷರ ಸ್ಪಷ್ಟನೆ

Update: 2022-06-21 12:06 GMT

ಮಂಗಳೂರು : ಮಿಲ್ಲತ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ನಿಯಮಿತ (ರಿ) ಮಂಗಳೂರು ಇದರ ಲೈಸನ್ಸ್ ರದ್ದಾಗಿಲ್ಲ ಎಂದು ಅಧ್ಯಕ್ಷ ಬಿ. ಇಬ್ರಾಹೀಂ ಸ್ಪಷ್ಟಪಡಿಸಿದ್ದರೆ.

ಮಿಲ್ಲತ್ ಸೊಸೈಟಿಯ ಪ್ರಧಾನ ಶಾಖೆಯು ಮಂಗಳೂರಿನ ಬಂದರ್‌ ನಲ್ಲಿದೆ. ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ೧೯೫೯ರ ಅನ್ವಯ ಸೊಸೈಟಿ ನೋಂದಾಯಿಸಲ್ಪಟ್ಟಿದೆ. ಕಾಟಿಪಳ್ಳ ಮತ್ತು ಜೋಕಟ್ಟೆಯಲ್ಲಿ ತನ್ನ ಬ್ರಾಂಚ್ ಆಫೀಸನ್ನು ಹೊಂದಿದೆ. ಸೊಸೈಟಿಯ ಕಾರ್ಯಕ್ಷೇತ್ರ ವ್ಯಾಪ್ತಿಯು ಮಂಗಳೂರು ಹಾಗೂ ಬಂಟ್ವಾಳ ತಾಲೂಕಿಗೆ ಸೀಮಿತವಾಗಿರುತ್ತದೆ. ಇತ್ತೀಚೆಗೆ ದಾವಣಗೆರೆಯ ಮಿಲ್ಲತ್ ಕೋ- ಅಪರೇಟಿವ್ ಬ್ಯಾಂಕ್‌ನ ಲೈಸನ್ಸ್‌ನ್ನು ಆರ್‌ಬಿಐ ರದ್ದುಗೊಳಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಸುದ್ದಿ ವಾರ್ತೆ ಪ್ರಕಟವಾಗಿದೆ. ಇದರಿಂದ ಸೊಸೈಟಿಯ ಗ್ರಾಹಕರಲ್ಲಿ ಗೊಂದಲ ಸೃಷ್ಟಿಯಾಗಿದೆ. ಸಂಶಯ ವ್ಯಕ್ತವಾಗಿದೆ. ಆರ್‌ಬಿಐಯಿಂದ ಲೈಸನ್ಸ್ ರದ್ದಾದ ಮಿಲ್ಲತ್ ಕೋ-ಅಪರೇಟಿವ್ ಬ್ಯಾಂಕ್‌ಗೂ ಮಿುಲ್ಲತ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಗೂ ಯಾವುದೇ ರೀತಿಯ ಸಂಬಂಧವಿಲ್ಲ.  ಮಿಲ್ಲತ್ ಕ್ರೆಡಿಟ್ ಸೊಸೈಟಿಯ ಹಣಕಾಸು ಸ್ಥಿತಿ ದೃಢವಾಗಿದೆ. ಲಾಭದಾಯಕವಾಗಿದ್ದು, ಪ್ರಗತಿಪಥದಲ್ಲಿದೆ. ಹಾಗಾಗಿ  ಮಿಲ್ಲತ್ ಕ್ರೆಡಿಟ್ ಕೊ-ಅಪರೇಟಿವ್ ಸೊಸೈಟಿಯ ಗ್ರಾಹಕರು ಆತಂಕಕ್ಕೊಳಗಾಗದೆ ಎಂದಿನಂತೆ ಸಹಕರಿಸುವಂತೆ ಆಡಳಿತ ಮಂಡಳಿಯ ಪರವಾಗಿ ಅಧ್ಯಕ್ಷರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News