ಕಾರ್ಮಿಕ ಸಂಘದ ನಿವೇಶನವನ್ನು ಬಿಲ್ಡರ್ ಗಳಿಗೆ ಮಾರಲು ಬಿಡುವುದಿಲ್ಲ: ಐಟಿಐ ಮಾಜಿ ನೌಕರರ ಎಚ್ಚರಿಕೆ

Update: 2022-06-23 14:41 GMT

ಬೆಂಗಳೂರು, ಜೂ.23: ಐಟಿಐ ನೌಕರರ ಸಂಘವು 1972ರಲ್ಲಿ ನೌಕರರ ವಂತಿಕೆಯಿಂದ ಕನ್ನಿಂಗ್‍ಹ್ಯಾಮ್ ರಸ್ತೆಯಲ್ಲಿ ನಿವೇಶನವನ್ನು ಖರೀದಿಸಿದೆ. ಆದರೆ ಈಗ ಅದನ್ನು ಸಂಘದ ಪದಾಧಿಕಾರಿಗಳು ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ಐಟಿಐ ಮಾಜಿ ನೌಕರರು ಹಾಗೂ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಆರೋಪಿಸಿದೆ.

ಗುರುವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಸಂಘದ ಸಂಘದ ಅಧ್ಯಕ್ಷ ಬಸವರಾಜಪ್ಪ, ನಿವೇಶನವು 18 ಸಾವಿರ ಕಾರ್ಮಿಕರಿಗೆ ಸೇರಿದ ಆಸ್ತಿ ಆಗಿದೆ. 1972 ರಲ್ಲಿ ನೌಕರರ ಸಂಘಕ್ಕೆ ತರಬೇಕೆಂಬ ಉದ್ದೇಶದಿಂದ ನಿವೇಶನವನ್ನು, 18 ಸಾವಿರ ಕಾರ್ಮಿಕರ ತಿಂಗಳ ವತಿಯಿಂದ ಖರೀದಿಸಲಾಯಿತು. ಈಗ ಆ ಜಾಗ ಸುಮಾರು 60 ಕೋಟಿ ಬೆಲೆಬಾಳುತ್ತದೆ. ಇಂತಹ ಬೆಲೆಬಾಳುವ ಜಾಗವನ್ನು ಕೇವಲ 70 ಕಾರ್ಮಿಕರ ಅನುಮತಿಯನ್ನು ಪಡೆದು ಐಟಿಐ ನೌಕರರ ಸಂಘ ಅಕ್ರಮವಾಗಿ ಮಾರಾಟ ಮಾಡಲು ಹೊರಟಿದೆ ಎಂದರು. 

ಹಿರಿಯ ಕಾರ್ಮಿಕರು ಸಂಪಾದನೆ ಮಾಡಿದ ಆಸ್ತಿಯನ್ನು ಯಾವುದೇ ಬಿಲ್ಡರ್‍ಗಳಿಗೂ ಖರೀದಿಸಲು ಅವಕಾಶ ನೀಡುವುದಿಲ್ಲ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಉದ್ದೇಶದಿಂದ ನಮ್ಮ ಕಾನೂನು ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು. 

ಪತ್ರಿಕಾಗೋಷ್ಠಿಯಲ್ಲಿ ಸೆಲ್ವರಾಜ್, ಸಿದ್ದಪ್ಪ, ಎಮ್.ಹೆಚ್. ವೇಣುಗೊಪಾಲ್, ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News