ಬಗಂಬಿಲ: ಹಿ.ಪ್ರಾ. ಶಾಲೆಯಲ್ಲಿ ಕಥೆ-ಕವನ ರಚನಾ ಕಾರ್ಯಾಗಾರ, ಕವಿಗೋಷ್ಠಿ

Update: 2022-06-25 13:02 GMT

ಉಳ್ಳಾಲ: ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಡುವ ಮುಖೇನ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅವಕಾಶ ನೀಡಬೇಕು ಎಂದು ಶಿಕ್ಷಣ ಇಲಾಖೆ ಮಂಗಳೂರು ದಕ್ಷಿಣ ವಿಭಾಗದ ಸಂಪನ್ಮೂಲ ವ್ಯಕ್ತಿ ಗೀತಾ ಡಿ. ಶೆಟ್ಟಿ ಹೇಳಿದರು.

ಅವರು ಗುರುಕುಲ ಕಲಾ ಪ್ರತಿಷ್ಠಾನ (ರಿ)ದ.ಕ. ಜಿಲ್ಲಾ ಘಟಕ ವತಿಯಿಂದ ದ.ಕ.ಜಿ.ಪ ಹಿ.ಪ್ರಾ ಶಾಲೆ ಬಗಂಬಿಲದಲ್ಲಿ ನಡೆದ ಕಥೆ ಮತ್ತು ಕವನ ರಚನಾ ಕಾರ್ಯಾಗಾರ ಹಾಗೂ ಕವಿಗೋಷ್ಟಿ ಉದ್ಘಾಟಿಸಿ ಮಾತನಾಡಿದರು.

ಕಥೆ ಹಾಗೂ ಕವನಗಳು ಸಮಾಜದ ಹಲವು ವಿಷಯಗಳನ್ನು ಪ್ರಸ್ತುತ ಪಡಿಸಲು ಅವಕಾಶ ಇರುವುದರಿಂದ ಸಮಾಜದ ಅವಿಬಾಜ್ಯ ಅಂಗವಾಗಿದೆ ಎಂದರು.

ಪರ್ತಕರ್ತ ಬಶೀರ್ ಕಲ್ಕಟ್ಟ ಮಾತನಾಡಿ ಕವನ, ಕಥೆ ರಚನಾ ಕಾರ್ಯಾಗಾರ ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಪ್ರತಿಭೆ ಯನ್ನು ಹೊರ ತರಲು ಸಾಧ್ಯ ಆಗುತ್ತದೆ.ಇಂತಹ ಅವಕಾಶ ನಾವು ಒದಗಿಸಬೇಕು ಎಂದರು.

ಗುರುಕುಲದ ಅಧ್ಯಕ್ಷ ಮಾನಸ ಕೈತಂಜೆ ಕಥೆ ಕಟ್ಟುವ ಬಗೆಯನ್ನು ವಿವರಿಸಿದರು. ಉಪಾಧ್ಯಕ್ಷರಾಗಿ ಡೊಂಬಯ್ಯ ಇಡ್ಕಿದು ಕವನ ಬರೆಯುವ ಕೌಶಲ ಹೇಳಿಕೊಟ್ಟರು.

ಸಭಾಧ್ಯಕ್ಷತೆಯನ್ನು ಕಲ್ಲರಕೋಡಿ ಶಾಲೆಯ ಸಹ ಶಿಕ್ಷಕಿ ವಿಜಯ ಲಕ್ಷ್ಮೀ ವಹಿಸಿದ್ದರು .ಮಂಗಳ ಗಂಗೋತ್ರಿ ಕೊಣಾಜೆಯ ಜೆಸಿಐ ಅಧ್ಯಕ್ಷ ಕಮಲಾಕ್ಷ ಡಿ. ಶೆಟ್ಟಿಗಾರ್, ಬಗಂಬಿಲ ದ.ಕ.ಜಿ.ಪಹಿ.ಪ್ರಾ.ಶಾಲೆಯ  ಮುಖ್ಯೋಪಾಧ್ಯಾಯ  ವಸಂತ ರೈ ,ಸಿಅರ್ ಪಿ ಹರೀಶ್  ಮತ್ತಿತರರು  ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News