ಬ್ರಹ್ಮಶ್ರೀ ನಾರಾಯಣಗುರುಗಳ ಪಠ್ಯ ತೆರವಿಗೆ ಹಿಂದೂ‌‌ ಮಹಾ‌ ಸಭಾ ವಿರೋಧ

Update: 2022-06-25 16:43 GMT

ಮಂಗಳೂರು: ಮಾನವಕುಲಕ್ಕೆ ಮಾರ್ಗದರ್ಶಕರಾಗಿ ಇರುವ ಬ್ರಹ್ಮಶ್ರೀ ನಾರಾಯಣಗುರುಗಳ ಪಠ್ಯವನ್ನು ಸಮಾಜ-ವಿಜ್ಞಾನ ಪುಸ್ತಕದಿಂದ ಬಿಟ್ಟಿರುವುದು ಷಡ್ಯಂತರ ವಾಗಿದ್ದು ಹಿಂದೂ ಸಮಾಜಕ್ಕೆ ಮಾಡಿರುವ ಅನ್ಯಾಯ ಎಂದು ಹಿಂದೂ ಮಹಾಸಭಾ ಖಂಡಿಸಿದೆ.

ಪಠ್ಯಪುಸ್ತಕ ಪರಿಷ್ಕರಣೆಯ ರೋಹಿತ್ ಚಕ್ರತೀರ್ಥ ಅವರಿಗೆ ನಗರದಲ್ಲಿ ಏರ್ಪಡಿಸಲಾಗಿದ್ದ ಸನ್ಮಾನ ಕಾರ್ಯಕ್ರಮದ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್, ಪಠ್ಯ ಪುಸ್ತಕ ಪರಿಷ್ಕರಣೆ ಹೆಸರಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅವಮಾನ ಮಾಡಿದಂತಹ ರೋಹಿತ್ ಚಕ್ರತೀರ್ಥ ರವರಿಗೆ ನಾಗರಿಕ ಸನ್ಮಾನ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದನ್ನು ಅಖಿಲ ಭಾರತ ಹಿಂದೂ ಮಹಾಸಭಾ ತೀವ್ರವಾಗಿ ಖಂಡಿಸುತ್ತದೆ. ಬ್ರಹ್ಮಶ್ರೀ ನಾರಾಯಣ ಗುರುಗಳು ಮಾನವ ಕುಲಕ್ಕೆ ಮಾರ್ಗದರ್ಶಕರಾಗಿದ್ದು ಅವರ ವಿಚಾರಗಳನ್ನು ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಓದುವಂತಹ ಸಮಾಜ ವಿಜ್ಞಾನ ಪುಸ್ತಕದಿಂದ ಬಿಟ್ಟಿರುವುದನ್ನು ಇದೊಂದು ಷಡ್ಯಂತ್ರ ವಾಗಿದ್ದು, ಹಿಂದೂ ಸಮಾಜಕ್ಕೆ ಮಾಡಿದ ಅವಮಾನ ಎಂದು ಕಟುವಾಗಿ‌ ನುಡಿದಿದ್ದಾರೆ.

ಇದು ಆಡಳಿತದಲ್ಲಿರುವ ಭಾರತೀಯ ಜನತಾ ಪಕ್ಷದ ನೇತೃತ್ವದ ರಾಜ್ಯ ಸರಕಾರದ ಹಿಂದೂ ವಿರೋಧಿ ನೀತಿಗಳಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ರಾಜೇಶ್ ಪವಿತ್ರ ನ್ ಹೇಳಿದ್ದಾರೆ.

ಇದಲ್ಲದೆ ಇಂಥವರನ್ನು ಕರೆದು ಸನ್ಮಾನ ಮಾಡುವಂತಹ ಶಾಸಕರು ಹಾಗೂ ಆಡಳಿತದಲ್ಲಿರುವಂತಹ ಬಂಡ ಸರಕಾರಕ್ಕೂ ಮುಂಬರುವ ಚುನಾವಣೆಯಲ್ಲಿ ಹಿಂದೂ ಸಮುದಾಯ ಹಾಗೂ ಹಿಂದೂ ಮಹಾಸಭಾ ಸೂಕ್ತವಾದ ಉತ್ತರವನ್ನು ನೀಡಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News