ಕಲ್ಲಡ್ಕ: ಸಮಸ್ತ ದಿನ ಆಚರಣೆ

Update: 2022-06-26 05:03 GMT

ಕಲ್ಲಡ್ಕ, ಜೂ.26: ಸತ್ಯ ದಾರಿಯಲ್ಲಿ ಅರಿವು ಮೂಡಿಸಿದ ಮಹಾನ್ ನಾಯಕರ, ಪುಣ್ಯ ಪುರುಷರ ತ್ಯಾಗೋಜ್ವಲ ಜೀವನ ಚರಿತ್ರೆಯನ್ನು ಮುಂದಿನ ಪೀಳಿಗೆ ಅರಿತು ಬದುಕುವುದಾಗಿದೆ ಎಂದು ಕಲ್ಲಡ್ಕ ಕೇಂದ್ರ ಜುಮಾ ಮಸೀದಿಯ ಖತೀಬ್ ಶೇಖ್ ಮುಹಮ್ಮದ್ ಇರ್ಫಾನಿ ಹೇಳಿದ್ದಾರೆ.

ಅವರು ಇಂದು ಕಲ್ಲಡ್ಕ ಕೇಂದ್ರ ಜುಮಾ ಮಸೀದಿಯ ವಠಾರದಲ್ಲಿ ನಡೆದ ಸಮಸ್ತ ಕೇರಳ ಜಂಯ್ಯತುಲ್ ಉಲಮಾದ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಮುನೀರುಲ್ ಇಸ್ಲಾಂ ಮದ್ರಸ ಸದರ್ ಲತೀಫ್ ದಾರಿಮಿ ಮಾತನಾಡಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಹಾಫಿಲ್ ಇಸ್ಮಾಯೀಲ್ ಉಸ್ತಾದ್, ಮಜೀದ್ ಯಮಾನಿ, ಖಾಸಿಂ ಯಮಾನಿ, ನಾಸಿರ್ ಉಸ್ತಾದ್, ಸಾದಿಕ್, ನವಾಝ್  ಉಪಸ್ಥಿತರಿದ್ದರು,

ಅಬೂಬಕರ್ ಸಾಹೇಬ್ ಸ್ವಾಗತಿಸಿದರು, ಅಬ್ದುಲ್ ಹಮೀದ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News