ಮಲ್ಪೆ ಬೀಚ್‌ನಲ್ಲಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆಯ ರಕ್ಷಣೆ

Update: 2022-06-26 12:36 GMT

ಉಡುಪಿ : ಮಲ್ಪೆ ಬೀಚ್‌ನಲ್ಲಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆಯೊಬ್ಬರನ್ನು ಲೈಫ್‌ಗಾರ್ಡ್ ತಂಡ ರಕ್ಷಿಸಿರುವ ಘಟನೆ ಇಂದು ಸಂಜೆ ನಡೆದಿದೆ.

30 ವರ್ಷ ಪ್ರಾಯದ ಮಹಿಳೆಯೊಬ್ಬರು ಮಲ್ಪೆ ಬೀಚ್‌ಗೆ ತನ್ನ ಮಗನೊಂದಿಗೆ ಬಂದಿದ್ದು, ಅಲ್ಲಿ ಆತ್ಮಹತ್ಯೆ ಮಾಡುವ ಉದ್ದೇಶದಿಂದ ಆ ಮಹಿಳೆ ಸಮುದ್ರದ ನೀರಿನತ್ತ ಓಡುತ್ತಿದ್ದರೆನ್ನಲಾಗಿದೆ. ಇದನ್ನು ಸ್ಥಳದಲ್ಲಿದ್ದ ಜೀವರಕ್ಷಕ ದಳದವರು ಗಮನಿಸಿದ್ದು, ತಕ್ಷಣವೇ ಆ ಮಹಿಳೆಯನ್ನು ರಕ್ಷಿಸಿ ತೀರಕ್ಕೆ ಕರೆತಂದರು.

ಘಟನೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಬಳಿಕ ಆ ಮಹಿಳೆ ಮತ್ತು ಮಗನನ್ನು ಜೀವರಕ್ಷಕ ದಳದವರು ಮಲ್ಪೆ ಪೊಲೀಸರಿಗೆ ಒಪ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News