ಮಂಜನಾಡಿ: 3ನೇ ಉರೂಸ್, ಸನದುದಾನ ಸಮ್ಮೇಳನದ ಸಮಾರೋಪ

Update: 2022-06-26 16:22 GMT

ಮಂಜನಾಡಿ: ಅಲ್ ಮದೀನಾ ಮಂಜನಾಡಿ ಇದರ ಆಶ್ರಯದಲ್ಲಿ ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ (ನ.ಮ.) ರವರ ಮೂರನೇ ಉರೂಸ್ ಹಾಗೂ ಸನದುದಾನ ಸಮ್ಮೇಳನದ ಸಮಾರೋಪ ಸಮಾರಂಭವು  ಅಲ್ ಮದೀನಾ ವಠಾರದಲ್ಲಿ ರವಿವಾರ ನಡೆಯಿತು.

ಕಾರ್ಯಕ್ರಮ ವನ್ನು ಅಸಯ್ಯದ್ ಇಸ್ಮಾಯಿಲ್  ಅಲ್ ಹಾದಿ ತಂಙಳ್ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಮಾತನಾಡಿ, ಶರಪ್ಪುಲ್ ಉಲಮಾ ಅಬ್ಬಾಸ್ ಉಸ್ತಾದ್ ಅವರು ಅಲ್ ಮದೀನಾದಲ್ಲಿ ನೆಟ್ಟ ಶಿಕ್ಷಣ ಕೇಂದ್ರ ಹೆಮ್ಮರವಾಗಿ ಬೆಳೆದು ನಿಂತಿದೆ. ಶೈಕ್ಷಣಿಕ ಕೇಂದ್ರ ಸ್ಥಾಪನೆ ಅವರ ಕನಸಾಗಿತ್ತು. ಅವರದನ್ನು ಈಡೇರಿಸಿದ್ದಾರೆ. ಈಗ ಅವರು ನಮ್ಮ ಜೊತೆ ಇಲ್ಲದಿದ್ದರೂ ಅವರ ಸಾಧನೆ ಈಗಲೂ ಇದೆ.ಎಲ್ಲರೂ  ಬಿರುದುದಾರಿಗಳು ಬಿರುದು ಪಡೆಯಲು ಅವರ ಸಾಧನೆ ಕಾರಣ. ಆದ್ದರಿಂದ ಪದವಿ ಪಡೆದ ವಿದ್ಯಾರ್ಥಿಗಳು ಸಮಾಜದಲ್ಲಿ ಯಾವುದೇ ಗೊಂದಲ ಮಾಡದೇ ಏಕತೆಯಿಂದ ಮುನ್ನಡೆಯಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕ ಯುಟಿ ಖಾದರ್, ವಕ್ಫ್ ಬೋರ್ಡ್ ರಾಜ್ಯಾಧ್ಯಕ್ಷ ಶಾಫಿ ಸಅದಿ ಬೆಂಗಳೂರು, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಲತೀಫ್ ಸಅದಿ ಶಿವಮೊಗ್ಗ, ಕೋಶಾಧಿಕಾರಿ ಅಬುಸುಫಿಯಾನ ಸಖಾಫಿ, ಅಶ್ರಫ್ ತಂಙಳ್ ಆದೂರು, ರಫೀಕ್ ಸ ಅದಿ ದೇಲಂಪಾಡಿ, ಮುಹಮ್ಮದ್ ಆಲಿ ಸಖಾಫಿ ಸುರಿಬೈಲ್, ಎಸ್ ಕೆ ಖಾದರ್ ಹಾಜಿ, ಮಜೀದ್ ಹಾಜಿ ಉಚ್ಚಿಲ,ಕೆ.ಎಂ.ಸಿದ್ದೀಕ್ ಮೋಂಟುಗೋಳಿ, ಹಾಜಿ ಎನ್ ಎಸ್ ಕರೀಂ, ಅಬ್ದುಲ್ ಜಲೀಲ್ ಮೊಂಟುಗೋಳಿ, ಇಕ್ಬಾಲ್ ಬೊಳ್ವಾರ್  ಮತ್ತಿತರರು ಉಪಸ್ಥಿತರಿದ್ದರು.

ಅಲ್ ಮದೀನಾ ಮೆನೇಜರ್ ಅಬ್ದುಲ್ ಖಾದರ್ ಸಖಾಫಿ ಸ್ವಾಗತಿಸಿದರು.ಕೆ.ಎಂಕೆ ಮಂಜನಾಡಿ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News