ಕುದ್ರೋಳಿ | ದ್ವಿತೀಯ ಪಿಯು ಪ್ರತಿಭಾನ್ವಿತರಿಗೆ ಎಸ್.ಐ.ಒ., ಜಿಐಒಯಿಂದ ಅಭಿನಂದನೆ ಕಾರ್ಯಕ್ರಮ

Update: 2022-06-27 07:43 GMT

ಮಂಗಳೂರು, ಜೂ.27: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ಕುದ್ರೋಳಿಯ ಆರು ವಿದ್ಯಾರ್ಥಿಗಳಿಗೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ(ಎಸ್.ಐ.ಒ.) ಮತ್ತು  ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್(ಜಿಐಒ) ಕುದ್ರೋಳಿ ವತಿಯಿಂದ ಅಭಿನಂದನಾ ಕಾರ್ಯಕ್ರಮವು ಕುದ್ರೋಳಿಯ ಫಾತಿಮಾ ಇಸ್ಲಾಮಿಕ್ ಸೆಂಟರ್ ನಲ್ಲಿ ನಡೆಯಿತು. 

ಪಿಯುಸಿಯಲ್ಲಿ ರಾಜ್ಯಕ್ಕೆ 2ನೇ ಟಾಪರ್ ಆದ ಇಲ್ಹಾಮ್ ರಫೀಕ್ (597 ಅಂಕಗಳು), ರಾಜ್ಯಕ್ಕೆ 10ನೇ ಟಾಪರ್ ಆದ ನಿಯಾಫ್ ಅಹ್ಮದ್ (589 ಅಂಕಗಳು), ಶೆಹಝಾನ್ ಅಹ್ಮದ್ (576 ಅಂಕಗಳು), ಫಾತಿಮಾ ಸಾನಿಯಾ (564 ಅಂಕಗಳು), ಸಲ್ಮಾನ್ ಫಾರಿಶ್ (561 ಅಂಕಗಳು), ಸಾರಾ ರೋಶೈನ್ (552 ಅಂಕಗಳು) ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತ ವಿದ್ಯಾರ್ಥಿಗಳು ತಮ್ಮ ಅನುಭವ, ಅನಿಸಿಕೆ ಮತ್ತು ಮುಂದಿನ ಗುರಿಯ ಕುರಿತಾಗಿ ಮಾತನಾಡಿದರು.

ಎಸ್ ಐ ಓ ಮಂಗಳೂರು ನಗರ ಅಧ್ಯಕ್ಷ ಮುಹಮ್ಮದ್ ಸಲ್ಮಾನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕುದ್ರೋಳಿ ಕಾರ್ಪೋರೇಟರ್ ಸಂಶುದ್ದೀನ್ ಕುದ್ರೋಳಿ, ಜಮಾಅತೆ ಇಸ್ಲಾಮಿ ಹಿಂದ್ ಕುದ್ರೋಳಿ ವರ್ತುಲ ಸಂಚಾಲಕ

ಮಕ್ಬೂಲ್ ಕುದ್ರೋಳಿ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ ಹಿತವಚನಗಳನ್ನು ನುಡಿದರು.

ಎಸ್ ಐ ಓ ದ.ಕ ಜಿಲ್ಲಾಧ್ಯಕ್ಷ  ನಿಹಾಲ್ ಮುಹಮ್ಮದ್ ಸಮಾರೋಪ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಎಸ್ ಐಓ ಕುದ್ರೋಳಿ ಘಟಕ ಅಧ್ಯಕ್ಷ ಮುಝಾಹಿರ್ ಅಹ್ಮದ್, ಜಿಐಓ ಕುದ್ರೋಳಿ ವರ್ತುಲ ಸಂಚಾಲಕಿ  ಹಲೀಮಾ ಆಲಿಯ ಅಮೀರ್ ಉಪಸ್ಥಿತರಿದ್ದರು.

ಸಾರ ಅಫ್ರಾ ಆಸಿಫ್ ಕಾರ್ಯಕ್ರಮ ನಿರೂಪಿಸಿದರು. ಆಯಿಷಾ ಸಫಾ ಕಿರಾಅತ್ ಪಠಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News