ಎಸ್ ಬಿ ಎಸ್ ಕುಪ್ಪೆಪದವು ವಿದ್ಯಾರ್ಥಿ ಒಕ್ಕೂಟದ ಮಹಾಸಭೆ: ಅಧ್ಯಕ್ಷರಾಗಿ ಅದ್ನಾನ್ ಸಿತಾರ್ ಆಯ್ಕೆ

Update: 2022-06-27 11:46 GMT
ಅದ್ನಾನ್ ಸಿತಾರ್/ ಸಿರಾಜುದ್ದೀನ್ ನೇಲಚ್ಚಿಲ್ / ಹಫೀಝ್ ಮಾಣಿಪಳ್ಳ

ಮಂಗಳೂರು: ಬದ್ರಿಯಾ ಜುಮಾ ಮಸ್ಜಿದ್ ಕುಪ್ಪೆಪದವು ಇದರ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಮದೀನತುಲ್ ಉಲೂಂ ಹೈಯರ್ ಸೆಕೆಂಡರಿ ಮದ್ರಸ  ವಿದ್ಯಾರ್ಥಿಗಳ ಒಕ್ಕೂಟ ಸುನ್ನೀ ಬಾಲ ಸಂಘ (SBS) ಇದರ ಮಹಾ ಸಭೆಯು ಖತೀಬರಾದ K.H.U ಶಾಫಿ ಮದನಿ ಕರಾಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

2022 -2023 ನೇ ಸಾಲಿನ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು ..

ಅಧ್ಯಕ್ಷರಾಗಿ ಮುಹಮ್ಮದ್ ಅದ್ನಾನ್ ,ಪ್ರಧಾನ ಕಾರ್ಯದರ್ಶಿಯಾಗಿ ಸಿರಾಜುದ್ದೀನ್ ನೇಲಚ್ಚಿಲ್, ಕೋಶಾಧಿಕಾರಿಯಾಗಿ ಹಫೀಝ್ ಮಾಣಿಪಳ್ಳ ಇವರನ್ನು ಆಯ್ಕೆ ಮಾಡಲಾಯಿತು. ಸದ್ರಿ ಸಮಿತಿಯ ಉಪಾಧ್ಯಕ್ಷರಾಗಿ A.R ಝಯಾನ್, ಸಿರಾಜುದ್ದೀನ್ ಮುರ ,ಮುಹಮ್ಮದ್ ಮುಸ್ತಫಾ  ಜೊತೆ ಕಾರ್ಯದರ್ಶಿಯಾಗಿ ಮುಹಮ್ಮದ್ ಫಾಯಿಝ್,ಮುಹಮ್ಮದ್ ಇಫಾಝ್ ಮುಹಮ್ಮದ್ ಮುಶ್ಫಿಕ್. ಕಾರ್ಯ ಕಾರಿ ಸಮಿತಿ ಸದಸ್ಯರಾಗಿ ಮುಹಮ್ಮದ್ ಅರ್ಫಾಝ್ ಅಬೂಬಕರ್ ಸಿದ್ದೀಖ್, ಮುಹಮ್ಮದ್ ಸುಹೈಲ್ ,ಮುಹಮ್ಮದ್ ನಿಯಾಝ್,ಅಬ್ದುಲ್ ಮುಕದ್ದಿಮ್, ಹನೀಶ್,ಶಬೀಬುರ್ರಹ್ಮಾನ್, ಇಸ್ಮಾಯಿಲ್ ಸ್ವರೂಫ್ ಹಾಶಿರ್ L, ಶುಹೈಬ್,ಝಿಯಾನ್, ಶಾಹಿಲ್,ಜಾಫರ್ ಸ್ವಾದಿಖ್, ಮುಝಮ್ಮಿಲ್ ,ಮುಹಮ್ಮದ್ ಸಈದ್, ಮುಹಮ್ಮದ್ ಶಾದ್ ಮುಹಮ್ಮದ್ ಇರ್ಶಾದ್ ಮುಹಮ್ಮದ್ ಅಶಕ್ ಇವರನ್ನು ಆಯ್ಕೆ ಮಾಡಲಾಯಿತು..

ಸದ್ರಿ ಸಮಿತಿಯ ಅಧೀನದಲ್ಲಿ ಮದೀನತು ಸ್ವಿಬಿಯಾನ್ ಗರ್ಲ್ಸ್ ವಿಂಗ್ ಅಸ್ತಿತ್ವಕ್ಕೆ ತರಲಾಯಿತು .ಅಧ್ಯಕ್ಷೆಯಾಗಿ ನಾಶಿದ, ಪ್ರಧಾನ ಕಾರ್ಯದರ್ಶಿಯಾಗಿ  ನಶ್ವ, ಕೋಶಾಧಿಕಾರಿಯಾಗಿ ನಜಿಲಾ ಹಾಗೂ ಉಪಾಧ್ಯಕ್ಷರಾಗಿ ಸಂಶೀದ ,ಫಾತಿಮಾ ,ಜೊತೆ ಕಾರ್ಯದರ್ಶಿಯಾಗಿ ಅಫ್ರೀನ ಆಶಿಕ ಮತ್ತು, ಆಯಿಶಾ ಫಿದಾ ಇವರನ್ನು ನೇಮಿಸಲಾಯಿತು.

ಪ್ರಸ್ತುತ ಸಭೆಯಲ್ಲಿ ಮದ್ರಸ ಅಧ್ಯಾಪಕರಾದ ಅಶ್ರಫ್ ಅಮಾನಿ ಇಂದಬೆಟ್ಟು ,ಹೈದರ್ ಮಿಸ್ಬಾಹೀ ಸಕಲೇಶಪುರ, ಫಾರೂಖ್ ಹಿಮಮಿ ಸಖಾಫಿ ಪೆರಾಲ, ಅಶ್ರಫ್ ಮದನಿ ನೆಕ್ಕಿಲ್ ಉಪಸ್ಥಿತರಿದ್ದರು. ಸಭೆಯ ಆರಂಭದಲ್ಲಿ ನಿಕಟಪೂರ್ವ ಕಾರ್ಯದರ್ಶಿ ಮುಸ್ತಫಾ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಸಿರಾಜುದ್ದೀನ್ ನೇಲಚ್ಚಿಲ್ ಧನ್ಯವಾದಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News