ದೇರಳಕಟ್ಟೆ: ಮಾಸಿಕ ಸಂಶುಲ್ ಉಲಮಾ ಮೌಲಿದ್

Update: 2022-06-27 17:02 GMT

ದೇರಳಕಟ್ಟೆ: ಎಸ್.ಕೆ.ಎಸ್.ಎಫ್  ದೇರಳಕಟ್ಟೆ ಶಾಖೆಯ ವತಿಯಿಂದ ಮಾಸಿಕ ಸಂಶುಲ್ ಉಲಮಾ ಮೌಲಿದ್ ಮಜ್ಲಿಸ್ ನಡೆಯಿತು. ದೇರಳಕಟ್ಟೆ ಬದ್ರಿಯಾ ಜುಮಾ ಮಸೀದಿ ಖತೀಬ್  ಬಹು ಇಸ್ಹಾಖ್ ಫೈಝಿ ನೇತೃತ್ವವನ್ನು ನೀಡಿದರು.

ಈ ಸಂದರ್ಭದಲ್ಲಿ ದೇರಳಕಟ್ಟೆ ರೇಂಜ್ ಜಂ-ಈಯ್ಯತ್ತುಲ್ ಮುಅಲ್ಲಿಮೀನ್ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಬಹು ಅಬ್ದುಲ್ ಅಝೀಝ್ ಫೈಝಿ ಪಟ್ಟೋರಿ. ಪ್ರಧಾನ ಕಾರ್ಯದರ್ಶಿ ಬಹುಅಬ್ದುರ್ರಹ್ಮಾನ್ ದಾರಿಮಿ, ಕೋಶಾಧಿಕಾರಿ ಹಾಜಿ ಅಬೂಬಕ್ಕರ್ ಸ್ವಾಗತ್, ಪತ್ರಕರ್ತ ಬಶೀರ್ ಕಲ್ಕಟ್ಟ ಇವರನ್ನು ಸನ್ಮಾನಿಸಲಾಯಿತು.   

ಈ ಕಾರ್ಯಕ್ರಮದಲ್ಲಿ ದೇರಳಕಟ್ಟೆ ಎಸ್ ವೈ ಎಸ್ ಉಪಾಧ್ಯಕ್ಷರಾದ ಮೊಹಮ್ಮದ್ ಪನೀರ್. ಎಸ್ ವೈ ಎಸ್ ಮಾಜಿ ಅಧ್ಯಕ್ಷ  ಹಾಜಿ ಮೊಹಮ್ಮದ್ ಅಲಿ. ಎಸ್ಕೆ ಎಸ್ ಎಸ್ ಎಫ್ ದೇರಳಕಟ್ಟೆ ಶಾಖೆಯ ಅಧ್ಯಕ್ಷ ಫೈಝಲ್ ಡಿ.ಎಂ.ಉಪಾಧ್ಯಕ್ಷ ಮೊಹಮ್ಮದ್ ಯಾಕೂಬ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News