ಪಠ್ಯದಲ್ಲಿ ನಾರಾಯಣಗುರು ವಿಚಾರ ಸೇರ್ಪಡೆ: ಬಿಲ್ಲವರ ಹೋರಾಟಕ್ಕೆ ಮುಸ್ಲಿಮ್ ಒಕ್ಕೂಟ ಬೆಂಬಲ

Update: 2022-06-28 13:49 GMT

ಮಂಗಳೂರು, ಜೂ.28: ಪಠ್ಯಪುಸ್ತಕದಲ್ಲಿ ನಾರಾಯಣ ಗುರು ವಿಚಾರ ಸೇರ್ಪಡೆಗಾಗಿ ಬಿಲ್ಲವರು ನಡೆಸುವ ಹೋರಾಟಕ್ಕೆ ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟವು ಬೆಂಬಲ ನೀಡಲಿದೆ ಎಂದು ಒಕ್ಕೂಟದ ಅಧ್ಯಕ್ಷ. ಮಾಜಿ ಮೇಯರ್ ಕೆ.ಅಶ್ರಫ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ನೇತೃತ್ವದ ರಾಜ್ಯ ಸರಕಾರವು ಗೋಡ್ಸೆವಾದಿ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ರಚಿಸಿ ರಾಜ್ಯದ ಪ್ರಮುಖ ದಾರ್ಶನಿಕರ, ಚಿಂತಕರ, ಸ್ವಾತಂತ್ರ್ಯ ಹೋರಾಟಗಾರರ, ಸಾಹಿತಿಗಳ, ವಚನಕಾರರ ವಿಚಾರಗಳನ್ನು ರಾಜ್ಯದ ಶಾಲಾ ಪಠ್ಯ ಪುಸ್ತಕಗಳಿಂದ ಕೈ ಬಿಟ್ಟಿದೆ. ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುವಿನ ಪಠ್ಯವನ್ನು ಹತ್ತನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದಿಂದ ಕೈ ಬಿಟ್ಟ ಬಗ್ಗೆ ಬಿಲ್ಲವ ಸಮುದಾಯ ನಡೆಸುವ ಪ್ರಜಾಸತ್ತತ್ಮಕ ಹೋರಾಟಕ್ಕೆ ಬೆಂಬಲ ನೀಡಲಿದೆ.

ನಾರಾಯಣ ಗುರುಗಳ ವಿಷಯವಲ್ಲದೆ ಡಾ. ಬಿ. ಆರ್.ಅಂಬೇಡ್ಕರ್‌ಗೆ ಸಂಬಂಧಿಸಿದಂತೆ ಸಂವಿಧಾನ ಶಿಲ್ಪಿ ಎಂಬ ಪದಬಳಕೆ, ಟಿಪ್ಪು ಸುಲ್ತಾನರ ಚರಿತ್ರೆ, ರಾಷ್ಟ್ರಕವಿ ಕುವೆಂಪುರವರ ಪಠ್ಯ, ಕ್ರಾಂತಿ ಯೋಗಿ ಬಸವಣ್ಣರವರ ವಚನ, ನಾಡಪ್ರಭು ಕೆಂಪೇ ಗೌಡರ ಜೀವನ ಕ್ರಮ ಪರಿಚಯ, ಕನಕದಾಸರ ಜೀವನ ವಿಚಾರ ಕರ್ನಾಟಕ ಏಕೀಕರಣದ ಹೋರಾಟಗಾರ, ಕಯ್ಯಾರ ಕಿಞ್ಞಣ್ಣ ರೈಯವರ ವಿಚಾರವನ್ನು ಒಳಗೊಂಡ ಪಠ್ಯಗಳನ್ನು ಮರು ಸೇರ್ಪಡೆಗೊಳಿಸಬೇಕು ಮತ್ತು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ಪರ ನಿಂತ ಹೆಡಗೆವಾರ್ ಕುರಿತ ವಿಚಾರವನ್ನು ಪಠ್ಯದಿಂದ ಕೈ ಬಿಡಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News