ಕೆನರಾ ಹೈಸ್ಕೂಲ್ ‌ಅಸೋಸಿಯೇಶನ್ ಅಧ್ಯಕ್ಷ ಅಣ್ಣಪ್ಪ ಪೈ ನಿಧನ

Update: 2022-06-29 17:25 GMT

ಮಂಗಳೂರು : ಕೆನರಾ ಹೈಸ್ಕೂಲ್ ‌ಅಸೋಸಿಯೇಶನ್ ಅಧ್ಯಕ್ಷ ಅಣ್ಣಪ್ಪ ಪೈ (74) ಅವರು ಬೆಂಗಳೂರಿನಲ್ಲಿ ಬುಧವಾರ  ನಿಧನರಾದರು.

ಅವರು ಪತ್ನಿ, ಇಬ್ಬರು ಪುತ್ರರಾದ ಒರೆಕಲ್ ಕಂಪೆನಿಯ ಅರವಿಂದ ಪೈ,  ಡೆಲಿವರಿ ಲಾಜಿಸ್ಟಿಕ್ ನಿರ್ದೇಶಕ ಅಜಿತ್ ಪೈ ಹಾಗೂ ಅಪಾರ ಸಂಖ್ಯೆಯ ಬಂಧು, ಮಿತ್ರರನ್ನು ಅಗಲಿದ್ದಾರೆ.

ಗುರುವಾರ ಮಧ್ಯಾಹ್ನ ಮಂಗಳೂರಿನಲ್ಲಿರುವ ಅವರ ಸ್ವಗೃಹದಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. 

ಖ್ಯಾತ ಸಂಸ್ಥೆ ಮಾಡರ್ನ್ ಕಿಚನ್ ಇದರ ಪಾಲುದಾರರಾಗಿರುವ ಅವರು ಪರೋಪಕಾರಿಯಾಗಿ, ಸಮಾಜದ ಸೇವಾ ಚಟುವಟಿಕೆಗಳಲ್ಲಿ ತೊಡಗಿ ಜನಪರ ಕಾಳಜಿಯನ್ನು ಹೊಂದಿದ್ದರು. ಸಾಹುಕಾರ್ ಬಾಬಾ ಪೈ ಮನೆತನದವರಾದ ಅಣ್ಣಪ್ಪ ಪೈ ಅವರು ರಾಘವೇಂದ್ರ ರಂಗ ಪೈ ಅವರ ಸುಪುತ್ರರಾಗಿದ್ದಾರೆ.

ಜಿಲ್ಲಾ ಸಣ್ಣ ಕೈಗಾರಿಕಾ ಅಸೋಸಿಯೇಶನ್ ಅಧ್ಯಕ್ಷರಾಗಿ, ರೋಟರಿ ಕ್ಲಬ್ ಅಧ್ಯಕ್ಷರಾಗಿ, ಮಾರ್ಡನ್ ಕಿಚನ್ & ಪ್ರೆಸ್ಟೋ ಬ್ರಾಂಡಿನ ಉತ್ಪನ್ನಗಳ ಯಶಸ್ಸಿನ ಹಿಂದಿನ ಪ್ರೇರಣಾ ಶಕ್ತಿಯಾಗಿ, M/s ರಾಘವೇಂದ್ರ ರಂಗ ಪೈ ( ಆರ್.ಆರ್.ಪೈ) ಇದರ ಪಾಲುದಾರರಾಗಿ, ಏಸ್ ಫುಡ್ಸ್ ಪ್ರೈ ಲಿ. ಇದರ ಆಡಳಿತ ನಿರ್ದೇಶಕರಾಗಿ ಯುವ ಉದ್ಯಮಿಗಳಿಗೆ ಸ್ಫೂರ್ತಿಯಾಗಿಯೂ ಅವರು ಜನಮಾನಸದಲ್ಲಿ ನೆಲೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News