×
Ad

ಗುಡ್ಡ ಕುಸಿತ: ಸುಳ್ಯ- ಪಾಣತ್ತೂರು ಅಂತಾರಾಜ್ಯ ರಸ್ತೆ ಸಂಪರ್ಕ ಕಡಿತ

Update: 2022-06-30 13:41 IST

ಸುಳ್ಯ, ಜೂ.30: ಧಾರಾಕಾರ ಮಳೆಯಿಂದ ಭಾರೀ ಪ್ರಮಾಣದಲ್ಲಿ ದರೆ ಕುಸಿದ ಪರಿಣಾಮ ಸುಳ್ಯ-ಪಾಣತ್ತೂರು ಅಂತಾರಾಜ್ಯ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಈ ರಸ್ತೆಯಲ್ಲಿ ಗಡಿ ಪ್ರದೇಶವಾದ ಕಲ್ಲಪಳ್ಳಿ ಬಾಟೋಳಿಯಲ್ಲಿ ಕೇರಳ ಭಾಗದಲ್ಲಿ ಈ ಕುಸಿತ ಸಂಭವಿಸಿದೆ. ರಸ್ತೆಯ ಬದಿಯ ದರೆ ಭಾರೀ ಪ್ರಮಾಣದಲ್ಲಿ ಜರಿದಿದ್ದು, ಮಣ್ಣು, ಕಲ್ಲು, ಮರಗಳು ರಸ್ತೆ ಮೇಲೆ ಬಿದ್ದಿದೆ. ಇದರಿಂದ ಭಾಗಶಃ ರಸ್ತೆ

ಮುಚ್ಚಿ ಹೋಗಿದೆ.

ಈ ಭಾಗದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು‌, ಅರ್ಧದಲ್ಲಿದೆ. ಇದೀಗ ಮಣ್ಣು ಕುಸಿದ ಕಾರಣ ರಸ್ತೆ ಸಂಪರ್ಕ ಪೂರ್ತಿಯಾಗಿ ಕಡಿತಗೊಂಡಿದೆ. ವಿದ್ಯುತ್ ಕಂಬಗಳಿಗೂ ಹಾನಿಯಾಗಿದ್ದು, ಈ ಪರಿಸರದಲ್ಲಿ ವಿದ್ಯುತ್ ಸಂಪರ್ಕ ಮೊಟಕುಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News