ಉದಯಪುರ ಕೃತ್ಯದ ಹಿಂದೆ ಭಯೋತ್ಪಾದಕ ಸಂಘಟನೆಗಳಿವೆ: ಸಿಎಂ ಬೊಮ್ಮಾಯಿ

Update: 2022-06-30 09:40 GMT

ಬೆಂಗಳೂರು, ಜೂ.30: ಉದಯಪುರದಲ್ಲಿ ನಡೆದಿರುವುದು ಅಮಾನವೀಯ ಹಾಗೂ ಅತ್ಯಂತ ಹೇಯ ಕೃತ್ಯ. ಇದರ ಹಿಂದೆ ವ್ಯಕ್ತಿ ಗಳಷ್ಟೇ ಅಲ್ಲ ಭಯೋತ್ಪಾದಕ ಸಂಘಟನೆಗಳಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ಇದು  ಭಯೋತ್ಪಾದನೆಯ ಒಂದು ಕ್ರಮವಾಗಿದೆ. ಅದರ ಹಿಂದೆ ಅಂತಾರಾಷ್ಟ್ರೀಯ ಷಡ್ಯಂತ್ರವಿದೆ. ಅದು ಪತ್ತೆಯಾಗಿ,  ಅಪರಾಧಿಗಳನ್ನು ಗಲ್ಲಿಗೇರಿಸಬೇಕು.  ರಾಜಸ್ತಾನ ಸರಕಾರ ಸಂಪೂರ್ಣ ತನಿಖೆ ಕೈಗೊಂಡು ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಪ್ರಧಾನ ಮಂತ್ರಿಯ ನಿರ್ದೇಶನದ ಮೇರೆಗೆ ತನಿಖೆ

 ಕೇಂದ್ರ ಗೃಹ ಸಚಿವಾಲಯದಿಂದ ರಾಜ್ಯ ಗುತ್ತಿಗೆದಾರರ ಸಂಘಕ್ಕೆ ದಾಖಲೆಗಳನ್ನು ಒದಗಿಸಲು ಸೂಚಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಹಿತಿ ಕೊಡಲಿ ತೊಂದರೆ ಇಲ್ಲ. ಪ್ರಧಾನ ಮಂತ್ರಿಯ ನಿರ್ದೇಶನದ ಮೇರೆಗೆ ತನಿಖೆ ಮಾಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News