×
Ad

ಮನೆಗೆ ನುಗ್ಗಿ ನಗ, ನಗದು ಕಳವು: ದೂರು

Update: 2022-06-30 23:00 IST

ಉಳ್ಳಾಲ: ಮನೆಗೆ ನುಗ್ಗಿದ ದುಷ್ಕರ್ಮಿಗಳು ನಗ, ನಗದು ಕಳವು ಮಾಡಿದ ಘಟನೆ ಉಳ್ಳಾಲ ಬೈಲಿನ ಬಂಗೇರ ಲೇನ್ ಎಂಬಲ್ಲಿ ನಡೆದಿದ್ದು, ಗುರುವಾರ ಬೆಳಕಿಗೆ ಬಂದಿದೆ.

ಉದ್ಯಮಿ ಶಿವ. ಕೆ ಎಂಬವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಿಂಬಾಗಿಲಿನ ಚಿಲಕ ಒಡೆದು ಒಳ ನುಗ್ಗಿದ ದುಷ್ಕರ್ಮಿಗಳು 210 ಗ್ರಾಂ ಚಿನ್ನ ಮತ್ತು 37,000 ರೂ. ನಗದು ದೋಚಿದ್ದಾರೆ ಎಂದು ತಿಳಿದುಬಂದಿದೆ.

ಶಿವ ಅವರು ಕುಟುಂಬ ಸಮೇತರಾಗಿ ಮಂಗಳವಾರ ಸಂಜೆ ಕೇರಳದ ಚೋಟನಿಕೆರೆ ಭಗವತೀ ಕ್ಷೇತ್ರಕ್ಕೆ ಹರಕೆ ತೀರಿಸಲೆಂದು ತೆರಳಿದ್ದರು. ಇಂದು ಬೆಳಗ್ಗೆ ಕುಟುಂಬ ವಾಪಸ್ಸಾಗಿ ಮನೆಯೊಳಗೆ ಹೋದಾಗ ಕಳ್ಳತನ ನಡೆದ ಪ್ರಕರಣ ಬೆಳಕಿಗೆ ಬಂದಿದೆ.

ಎಸಿಪಿ ದಿನಕರ ಶೆಟ್ಟಿ ನೇತೃತ್ವದಲ್ಲಿ ಶ್ವಾನ ದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News