ದ.ಕ. ಜಿಲ್ಲೆ: ಮುಂದುವರಿದ ಮಳೆ, ಹಾನಿ

Update: 2022-07-01 12:54 GMT

ಮಂಗಳೂರು : ದ.ಕ.ಜಿಲ್ಲೆಯಲ್ಲಿ ಶುಕ್ರವಾರವೂ ಮಳೆ ಮುಂದುವರಿದಿದೆ. ಆದರೆ ಗುರುವಾರ ಸುರಿದ ಮಳೆಗೆ ಹೋಲಿಸಿದರೆ ಶುಕ್ರವಾರ ಸುರಿದ ಮಳೆಯ ಪ್ರಮಾಣ ಕೊಂಚ ಇಳಿಮುಖವಾಗಿತ್ತು. ಸತತ ಸುರಿದ ಮಳೆಯಿಂದಾಗಿ ಹಾನಿಯ ಪ್ರಮಾಣವೂ ಹೆಚ್ಚಾಗಿದೆ.

ಕಳೆದ ಎರಡು ದಿನದಲ್ಲಿ ಸುರಿದ ಮಳೆಗೆ ಜಿಲ್ಲೆಯಲ್ಲಿ ೧೨ ಮನೆಗಳು ಸಂಪೂರ್ಣ ಕುಸಿದಿದೆ. ೮೦ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಅದಲ್ಲದೆ ೧೧೯ ಮನೆಯೊಳಗೆ ನೀರು ನುಗ್ಗಿದ್ದು ವಾಸಕ್ಕೆ ಸಮಸ್ಯೆಯಾಗಿತ್ತು. ಅದಲ್ಲದೆ ರಾ.ಹೆ., ಜಿಲ್ಲಾ ರಸ್ತೆ, ಗ್ರಾಮೀಣ ರಸ್ತೆ, ಸೇತುವೆ, ವಿದ್ಯುತ್ ತಂತಿ, ಸರಕಾರಿ ಕಟ್ಟಡ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಹಾನಿಯಾಗಿದೆ.

ಇದರೊಂದಿಗೆ ಈವರೆಗೆ ಹಾನಿಗೀಡಾದ ಸೊತ್ತುಗಳ ನಷ್ಟದ ಮೊತ್ತ 1.50 ಕೋ.ರೂ. ಅಂದಾಜಿಸಲಾಗಿದೆ ಎಂದು ದ.ಕ.ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News