ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಶೈಕ್ಷಣಿಕ, ಸಾಮಾಜಿಕ ನೆರವಿನ ಕಾರ್ಯ ಶ್ಲಾಘನೀಯ: ಎ.ಜೆ.ಶೆಟ್ಟಿ

Update: 2022-07-01 16:43 GMT

ಮಂಗಳೂರು; ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮೂಲಕ ಶೈಕ್ಷಣಿಕ ಸಾಮಾಜಿಕ ನೆರವು ನೀಡುತ್ತಿರುವ ಕಾರ್ಯ ಮಹತ್ವದ್ದಾಗಿದೆ ಎಂದು ಎ.ಜೆ.ಸಮೂಹ ಸಂಸ್ಥೆ ಗಳ ಅಧ್ಯಕ್ಷ ಎ.ಜೆ.ಶೆಟ್ಟಿ ತಿಳಿಸಿದ್ದಾರೆ.

ನಗರದ ಬಂಟ್ಸ್ ಹಾಸ್ಟೆಲ್ ನ ಅಮೃತ ಮಹೋತ್ಸವ ಕಟ್ಟಡದಲ್ಲಿ ಗುರುವಾರ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸನ್ಮಾನ ಹಾಗೂ ಪಲಾನುಭವಿಗಳಿಗೆ ಚೆಕ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸಮಾಜದಲ್ಲಿ ಕಷ್ಟದಲ್ಲಿರುವವರಿಗೆ ನೆರವು ನೀಡುವುದು ಉತ್ತಮ ಕೆಲಸ ಈ ನಿಟ್ಟಿನಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಬಡವರಿಗೆ ಮನೆ ಕಟ್ಟಲು ಸಹಾಯ, ವೈದ್ಯಕೀಯ ಚಿಕಿತ್ಸೆಗೆ ನೆರವು, ಮದುವೆಗೆ ಸಹಾಯ, ಶಿಕ್ಷಣಕ್ಕಾಗಿ ಪ್ರೋತ್ಸಾಹ ನೀಡುತ್ತಿರುವುದು ಮಾದರಿ. ಈ ಕೆಲಸದಲ್ಲಿ ಅವರೊಂದಿಗೆ ಉಳಿದವರು ಕೈ ಜೋಡಿ ಸಬೇಕು. ಈ ಕಾರ್ಯಕ್ರಮಗಳಿಗೆ 5ಲಕ್ಷ ರೂಗಳ ಕೊಡುಗೆ ತಾನು ನೀಡುವುದಾಗಿ ಎ.ಜೆ.ಶೆಟ್ಟಿ.ತಿಳಿಸಿದ್ದಾರೆ.

ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷರಾದ ಹರೀಶ್ ಶೆಟ್ಟಿಯವರು ವಹಿಸಿ ಮಾತನಾಡುತ್ತಾ ಸಮಾಜದಲ್ಲಿ ಆರ್ಥಿಕ ವಾಗಿ ಹಿಂದುಳಿದವರಿಗೆ ಉಳಿದವರು ಮನಪೂ ರ್ವಕ ವಾ ಗಿ ಸಹಾಯ ಹಸ್ತ ಚಾಚಿದರೆ ಸಮಾಜ ಮುಂದೆ ಬರಲು ಸಾಧ್ಯ ವಿದೆ.ಈ ನಿಟ್ಟಿನಲ್ಲಿ ಸಹಕಾರ ನೀಡುತ್ತಿರುವ ಎಲ್ಲರ ನ್ನೂ ಕೃತಜ್ಞತಾ ಪೂರ್ವಕ ವಾಗಿ ನೆನಪಿಸಿಕೊಳ್ಳುತ್ತಾ, ಮುಂದೆಯೂ ಅವರ ಸಹಾಯ ಅಗತ್ಯವಿದೆ ಎಂದು ಐಕಳ ಹರೀಶ್ ಶೆಟ್ಟಿ ಮನವಿ ಮಾಡಿದರು.

ಗೌರವ ಅತಿಥಿಗಳಾದ ಸುಧಾಕರ್ ಶೆಟ್ಟಿ ಸುಗ್ಗಿ ಅಧ್ಯಕ್ಷರು ಹುಬ್ಬಳ್ಳಿ ಧಾರವಾಡ ಬಂಟ್ಸ್ ಸಂಘ, ಸುರೇಶ್ ಜಿ. ಶೆಟ್ಟಿ ಏರ್ಮಾಳ್ ಮಾಜಿ ಕರ್ಪೊರೇಟರ್ ನ್ಯೂ ಮುಂಬೈ ಮತ್ತು ಸೀತಾರಾಮ್ ರೈ ಸವಣೂರು  ಅಧ್ಯಕ್ಷರು ವಿದ್ಯಾರಶ್ಮಿ ವಿದ್ಯಾ ಸಂಸ್ಥೆಗಳು ಸವಣೂರು ಪುತ್ತೂರು,ಕೆ. ಪಿ ಸುಚರಿತ ಶೆಟ್ಟಿ ಅಧ್ಯಕ್ಷರು ದ.ಕ. ಹಾಲು ಉತ್ಪಾದಕರ  ಒಕ್ಕೂಟ,  ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷರು ಬಂಟರ ಯಾನೆ ನಾಡವರ ಮಾತೃ ಸಂಘ, ಒಕ್ಕೂಟದ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ್ ಶೆಟ್ಟಿ, ಕಾರ್ಯದರ್ಶಿ ಜಯಕರ್ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನದಾಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಸತೀಶ್ ಅಡಪ್ಪ ಸಂಕಬೈಲ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತದಾರ  ಸೀತಾರಾಮ್ ರೈ ಸವಣೂರು, ಎ. ಸಿ. ಪಿ. ಮಂಗಳೂರು ದಕ್ಷಿಣ ಆರಕ್ಷಕ ಇಲಾಖೆ  ದಿನಕರ್ ಶೆಟ್ಟಿ, ದ. ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ಇದರ ಅಧ್ಯಕ್ಷರು  ಕೆ. ಪಿ. ಸುಚರಿತ ಶೆಟ್ಟಿ, ವಾರ್ತಾಭಾರತಿ ದಿನಪತ್ರಿಕೆಯ ಮಂಗಳೂರು ಬ್ಯೂರೋ ಮುಖ್ಯಸ್ಥ ಪುಷ್ಪರಾಜ್ ಬಿ. ಎನ್, ಎಸ್. ಡಿ. ಎಮ್. ಆಯುರ್ವೇದ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಪ್ರತಿಭಾ ರೈ, ರಾಜೇಶ್ವರಿ ಡಿ ಶೆಟ್ಟಿ ಅಧ್ಯಕ್ಷರು ಜೆ. ಸಿ. ಐ. ಸುರತ್ಕಲ್ ಇವರುಗಳನ್ನು ಸನ್ಮಾನಿಸ ಲಾಯಿತು.ಇದೇ ಸಂದರ್ಭದಲ್ಲಿ ಒಕ್ಕೂಟದ ಸಮಾಜ ಕಲ್ಯಾಣ ಕಾರ್ಯಕ್ರಮ ದ ಅಂಗವಾಗಿ ಸುಮಾರು 40ಲಕ್ಷ ರೂ ಗಳ ಸಹಾಯ ಧನವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಒಕ್ಕೂಟದ ಪೋಷಕರುಗಳು, ಸದಸ್ಯ ಸಂಘಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಒಕ್ಕೂಟದ ಸಿಬ್ಬಂದಿ, ಪಲಾನುಭವಿಗಳು ಮತ್ತು ಪಲಾನುಭವಿಗಳ ಕುಟುಂಬಸ್ಥರು, ಇನ್ನಿತರರು ಉಪಸ್ಥಿತರಿದ್ದರು. ಪ್ರಖ್ಯಾತ್ ಶೆಟ್ಟಿ ಸುರತ್ಕಲ್ ಇವರ ಪ್ರಾರ್ಥಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News