ಭಾರೀ ಮಳೆ; ಉಳ್ಳಾಲ ತಾಲೂಕಿನಲ್ಲಿ ವಿವಿಧೆಡೆ ಹಾನಿ

Update: 2022-07-01 16:47 GMT

ಉಳ್ಳಾಲ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಉಳ್ಳಾಲ ತಾಲೂಕು ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಹಾನಿಯಾದ ಬಗ್ಗೆ ವರದಿಯಾಗಿದೆ.

ಕಿನ್ಯ ಪಂಚಾಯತ್ ನಾ ಅಂಗನವಾಡಿ  ಬಳಿ ಪಿ.ಕೆ.ಮೊಹಮ್ಮದ್ ಮನೆ ಸಮೀಪ ಗುಡ್ಡ ಕುಸಿದು ಜರಿದು ಬಿದ್ದಿದೆ. ಇದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.ಮೀಂಪ್ರಿ ಬಳಿ ಮನೆಯ ಛಾವಣಿ ಕುಸಿದು ಹಾನಿಯಾಗಿದೆ. ಕಿನ್ಯ ಪಂಚಾಯತ್ ಬಳಿ ಹೊಸದಾಗಿ ನಿರ್ಮಾಣ ಆಗುತ್ತಿರುವ ಸಂಪರ್ಕ ಸೇತುವೆ ಬಳಿ ಕೃತಕ ನೆರೆ ಆವರಿಸಿದೆ. ಕೋಣಾಜೆ ಗ್ರಾಮದ ಗುಡ್ಡೆ ಕೊಪ್ಪಳ ಬಳಿ ಮೋಹಮ್ಮದ್ ಎಂಬವರ ಕೃಷಿ ಗೆ ಕಾಂಪೌಂಡ್ ಕುಸಿದು ಬಿದ್ದು ಕೃಷಿ ಗೆ ಹಾನಿಯಾಗಿದೆ. ಪೆರ್ಮನ್ನೂರು ಬಳಿ ಕಂ ಪೌಂಡ್ ಕುಸಿದು ಬಿದ್ದು ಕಾರ್ ಗೆ ಹಾನಿಯಾಗಿದೆ. ಸಜಿಪನಡು ಗ್ರಾಮದ ದೇರಾಜೆ ಬಳಿ ಗುಡ್ಡೆ ಕುಸಿದು ಬಿದ್ದ ಪರಿಣಾಮ ದನದ ಕೊಟ್ಟಿಗೆ ಯ ಗೋಡೆಗೆ ಹಾನಿಯಾಗಿದೆ. ಇರಾ ಗ್ರಾಮ ದ ನಾಯರ್ ಕೋಡಿ ಬಳಿ ಗುಡ್ಡೆ ಕುಸಿದು ದನದ ಕೊಟ್ಟಿಗೆ ಗೆ ಹಾನಿಯಾಗಿದೆ.

ಮುನ್ನೂರು ಗ್ರಾಮದ ಸೌಮನಾಥ ಉಳಿಯ ಬಳಿ ರೀಟಾ ಅವರ ಮನೆಯ ಕಾಂಪೌಂಡ್ ಕುಸಿದು ಮನೆ ಅಪಾಯದಂಚಿನಲ್ಲಿದೆ. ಸಂತೋಷ್ ನಗರದಲ್ಲಿ ಶಾಂತಿ ಮೋಂತೆರೋ ಅವರ ಮನೆಯ ಕಾಂಪೌಂಡ್ ಹಾಲ್ ಜರಿದು ಬಿದ್ದಿದ್ದು, ಮನೆ ಅಪಾಯದಂಚಿನಲ್ಲಿದೆ.ಕೋಟೆಕಾರ್ ಪ.ಪಂ. ವ್ಯಾಪ್ತಿಯ ಬಲ್ಯದಲ್ಲಿ ಮನೆಗೆ ಹಾನಿಯಾಗಿದೆ. ಮಿತ್ರನಗರದಲ್ಲಿ ಯಜ್ಞೇಶ್ ಆಚಾರ್ ಅವರ ಮನೆಗೆ ಹಾನಿಯಾಗಿದೆ.

ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕೊಲ್ಯದಲ್ಲಿ ಮನೆಗೆ ಮರ ಬಿದ್ದು ಹಾನಿಯಾಗಿದೆ. ಬೆಟ್ಟಂಪಾಡಿ ತೀವ್ರ ಕಡಲ್ಕೊರೆತ ದಿಂದ ರಸ್ತೆ ಸಮುದ್ರ ಪಾಲಾಗಿದ್ದು, ಇದರಿಂದ ರಾಜೀವಿ ಎಂಬವರ ಮನೆ ಅಪಾಯದಂಚಿನಲ್ಲಿದೆ. ಈ ಕುಟುಂಬವನ್ನು ಸಂಬಂಧಿಕರ ಮನೆಗೆ ತಾತ್ಕಾಲಿಕ ಸ್ಥಳಾಂತರ ಮಾಡಲಾಗಿದೆ. ಉಚ್ಚಿಲ, ಪೆರಿಬೈಲ್ ನಲ್ಲಿ ಕಡಲ್ಕೊರೆತಕ್ಕೆ ಕೆಲವು ಮನೆಗಳು ಅಪಾಯದಂಚಿನಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News