ಜಾಲಿ ಪ.ಪಂ. ವ್ಯಾಪ್ತಿಯಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಅಪೂರ್ಣ ಯುಜಿಡಿ ಕಾಮಾಗಾರಿ

Update: 2022-07-03 14:19 GMT

ಭಟ್ಕಳ: ತಾಲೂಕಿನ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಯುಡಿಜಿ (ಒಳಚರಂಡಿ) ಕಾಮಾಗಾರಿ ಇದು ವರೆಗೂ ಪೂರ್ಣಗೊಳ್ಳದೆ ರಸ್ತೆಗಳಲ್ಲಿ 2-3 ಅಡಿ ಆಳದ ಹೊಂಡ ನಿಮಾರ್ಣಗೊಂಡಿದ್ದು ಇದರಿಂದಾಗಿ ವಾಹನಗಳು ಮತ್ತು ಜನರ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದೆ. 

ರವಿವಾರದಂದು ಇಲ್ಲಿನ ಖಾಸಗಿ ಶಾಲೆಯೊಂದರ ವಿದ್ಯಾರ್ಥಿಗಳನ್ನು ಸಾಗಿಸುವ ವಾಹನವೊಂದರ ಎರಡು ಚಕ್ರ ನೆಲದಲ್ಲಿ ಹುದುಗಿಕೊಂಡಿದ್ದು ಕೂದಳೆಯಲ್ಲಿ ದೊಡ್ಡ ಅಪಾಯವೊಂದು ತಪ್ಪಿದಂತಾಗಿದೆ.

ಇಲ್ಲಿನ ಮೋಸನಗರ, ಬದ್ರಿಯಾ ಕಾಲನಿ, ಮುಹಿದ್ದೀನ್ ಸ್ಟ್ರೀಟ್, ಮತ್ತಿತರರ ಪ್ರದೇಶಗಳಲ್ಲಿ ಶಾಲಾವಾಹನಗಳು ಓಡಾಡುತ್ತಿದ್ದು ಯುಜಿಡಿಯ ಅಪೂರ್ಣ ಮತ್ತು ಅಸಮರ್ಪಕ ಕಾಮಾಗಾರಿಯಿಂದಾಗಿ ರಸ್ತೆಯ ಮಧ್ಯದಲ್ಲಿ 2-3 ಅಡಿ ಆಳದ ಹೊಂಡ ನಿಮಾರ್ಣಗೊಂಡಿದೆ. ಇದಕ್ಕೆ ಮಣ್ಣು ಮುಚ್ಚುವ ಅಥವಾ ತಾತ್ಕಾಲಿಕ ದುರಸ್ತಿ ಮಾಡುವ ಗೋಜಿಗೆ ಹೋಗದೆ ಅದನ್ನು ಹಾಗೆ ಬಿಟ್ಟುಬಿಟ್ಟಿದ್ದಾರೆ. ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳು ಮತ್ತಷ್ಟು ಹದಗೆಟ್ಟಿವೆ. ಜಾಲಿ ಪ.ಪಂ ನವರು ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಏಕೆಂದರೆ ಇದುವರೆಗೆ ಜಾಲಿ ಪಟ್ಟಣ ಪಂಚಾಯತ್ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಾಗಿರುವುದಿಲ್ಲ. ಯಾರು ಕೂಡ ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಮಾಡುತ್ತಿಲ್ಲ. ಯುಜಿಡಿ ಕಾಮಾಗಾರಿ ನಡೆಸುತ್ತಿರುವವರನ್ನು ಕೇಳಿದರೆ ಅವರು ಕೂಡ ನಮಗೆ ಇಷ್ಟನ್ನೇ ಮಾಡಲು ಹೇಳಿದ್ದು ಎಂದು ಕೈತೊಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಸಂಪೂರ್ಣ ಜವಾಬ್ದಾರಿ ಯಾರುದ್ದು ಎನ್ನುವ ಪ್ರಶ್ನೆ ಸಾರ್ಜಜನಿಕರದ್ದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News