ಮಂಗಳೂರು; ಹಾಲಿನ ಪುಡಿಯ ಪ್ಯಾಕೆಟ್ ನಲ್ಲಿ ಚಿನ್ನ ಅಕ್ರಮ ಸಾಗಾಟ ಪತ್ತೆ

Update: 2022-07-03 16:34 GMT

ಮಂಗಳೂರು, ಜು.3: ಹಾಲಿನ ಪುಡಿಯ ಪ್ಯಾಕೆಟ್ ನಲ್ಲಿಟ್ಟು ದುಬೈನಿಂದ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಜು.1ರಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದಾರೆ.

ಕಾಸರಗೋಡಿನ ಪ್ರಯಾಣಿಕ ಪೇಸ್ಟ್ ರೂಪಕ್ಕೆ ಪರಿವರ್ತಿಸಿದ 31,31,440 ರೂ. ಮೌಲ್ಯದ 602.200 ಗ್ರಾಂ ಚಿನ್ನವನ್ನು ಹಾಲಿನ ಪುಡಿಯ ಪ್ಯಾಕೆಟ್ ನೊಳಗಿಟ್ಟು  ಸಾಗಿಸುತ್ತಿದ್ದ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News