×
Ad

ವೈದ್ಯಕೀಯ ಪವಿತ್ರ ವೃತ್ತಿ, ಅದರ ಘನತೆಗೆ ಕುಂದಾಗದಂತೆ ನಿರ್ವಹಿಸಿ: ಡಾ.ಶಾಂತರಾಮ ಶೆಟ್ಟಿ

Update: 2022-07-03 23:06 IST

ಮಂಗಳೂರು: ವೈದ್ಯಕೀಯ ವೃತ್ತಿಗೆ ಕುಂದು ಬರದಂತೆ ಕಾರ್ಯ ನಿರ್ವಹಿಸಿ ಎಂದು ಖ್ಯಾತ ವೈದ್ಯ ಹಾಗೂ ನಿಟ್ಟೆ ಪರಿಗಣಿತ ವಿ.ವಿ.ಯ ಸಹ ಕುಲಾಧಿಪತಿ  ಡಾ.ಶಾಂತಾರಾಮ ಶೆಟ್ಟಿ ತಿಳಿಸಿದ್ದಾರೆ.

ಅವರು ನಗರದ ಐಎಂಎ ಸಭಾಂಗಣದಲ್ಲಿಂದು ಇಂಡಿಯನ್ ಮೆಡಿಕಲ್ ಎಸೋಸಿಯೇಶನ್ ಮತ್ತು ಕೆಎಂಸಿ ವತಿ ಯಿಂದ ಹಮ್ಮಿಕೊಂಡಿದ್ದ ವೈದ್ಯರ ದಿನಾ ಚರಣೆ ಯನ್ನು ಉದ್ಘಾಟಿಸಿ  ಮಾತ ನಾಡುತ್ತಿದ್ದರು.

ಬಿ.ಸಿ.ರಾಯ್ ಭಾರತ ರತ್ನ ಪಡೆದ ದೇಶದ ಏಕೈಕ ವೈದ್ಯ. ತಮ್ಮ ಎಲ್ಲಾ ಆಸ್ತಿ ಯನ್ನು ಸಮಾಜ ಕ್ಕೆ ಸಮರ್ಪಿಸಿದವರು ಮತ್ತು ಪ್ರಾಮಾಣಿಕ ಮುಖ್ಯಮಂತ್ರಿ ಎಂಬ ಹೆಸರು ಪಡೆದ ಎಕೈಕ ವೈದ್ಯರೆಂಬ ಖ್ಯಾತಿ ಪಡೆದವರು. ಕೋವಿಡ್ ಸಂದರ್ಭದಲ್ಲಿ ವೈದ್ಯರ ಸೇವೆ ಅತ್ಯಂತ ಮಹತ್ವ ಪಡೆದಿತ್ತು. ಅದನ್ನು ಸಮಾಜ ಗುರುತಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ವೈದ್ಯರು ದೇಶಾದ್ಯಂತ ಮಾತ್ರವಲ್ಲ ಜಗತ್ತಿನಾದ್ಯಂತ ಸೇವೆ ಸಲ್ಲಿಸು ತ್ತಿದ್ದಾರೆ ಎಂದು ಶಾಂತಾರಾಮ ಶೆಟ್ಟಿ ತಿಳಿಸಿ ವೈದ್ಯರ ದಿನಾಚರಣೆ ಯ ಶುಭ ಹಾರೈಸಿದರು.

ಸಮಾರಂಭದಲ್ಲಿ ಕೆ.ಎಂ.ಸಿ ಡೀನ್ ಡಾ. ಉಣ್ಣಿಕೃಷ್ಣ ನ್  ಮಾತನಾಡುತ್ತಾ ವೈದ್ಯಕೀಯ ವೃತ್ತಿ ಮನುಕುಲದ ಸೇವೆಯೆಂದು ಪರಿಗಣಿಸಬೇಕಾಗಿದೆ. ಕೋವಿಡ್  ಹಲವು ಸವಾಲು ಗಳನ್ನು ನಮ್ಮ ಎದುರು ತಂದಿತ್ತು.ಅದನ್ನು ಎದುರಿಸಲು ಸಾಧ್ಯ ವಾಯಿತು ಎಂದು ವೈದ್ಯರ ದಿನಾಚರಣೆ ಯ ಶುಭ ಹಾರೈಸಿದರು.

ಸಮಾರಂಭದಲ್ಲಿ ಡಾ.ಎಂ.ಸಿ.ಸುವ ರ್ಣ (ಯ್ಯೂರೊಲೊಜಿಸ್ಟ್ ) ಡಾ.ಜೆ.ಎನ್.ಭಟ್ (ಫಿಜಿಷಿಯನ್ )ಡಾ.ಡೆನ್ ಝಿಲ್ ಪಿಂಟೋ (ಸೈಕಾಟ್ರಿಸ್ಟ್ )ರವರನ್ನು ಬಿದನ್ ಚಂದ್ರ ರಾಯ್ ಸ್ಮರಣಾರ್ಥ ಆಚರಿಸಲಾಗುತ್ತಿರುವ ವೈದ್ಯರ ದಿನಾಚರಣೆಯ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಐಎಂಎ ಅಧ್ಯಕ್ಷ ಡಾ.ಸತ್ಯಮೂರ್ತಿ ಐತಾಳ್ ಸಮಾರಂಭದ ಅಧ್ಯಕ್ಷ ತೆ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷ  ಡಾ.ಅಣ್ಣಯ್ಯ ಕುಲಾಲ್, ಐಎಂಎ ಪದಾಧಿಕಾರಿಗಳಾದ ಕೆ.ಆರ್.ಕಾಮತ್ ,ದಿವಾಕರ ರಾವ್, ಮಂಗಳೂರು ಘಟಕದ  ಕಾರ್ಯದರ್ಶಿ ಡಾ.ಸದಾನಂದ ಪೂಜಾರಿ, ಖಜಾಂಚಿ ಡಾ.ಜಿ.ಕೆ.ಭಟ್ ಸಂಕ ಬಿತ್ತಿಲು ಮೊದಲಾದವರು ಉಪಸ್ಥಿತರಿದ್ದರು. ಡಾ.ಸುನಿಲ್ ಜತ್ತಣ್ಣ ಡಾ.ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News