ವಿಟ್ಲ - ಪೆರ್ಲ ರಸ್ತೆಯ ಸಾರಡ್ಕದಲ್ಲಿ ಗುಡ್ಡ ಕುಸಿತ

Update: 2022-07-05 06:36 GMT

ವಿಟ್ಲ: ಭಾರೀ ಮಳೆಗೆ ವಿಟ್ಲ - ಪೆರ್ಲ ರಸ್ತೆಯ ಸಾರಡ್ಕದಲ್ಲಿ ಗುಡ್ಡ ಕುಸಿತವಾದ ಘಟನೆ ಮಂಗಳವಾರ ನಡೆದಿದೆ.

ಕಾಸರಗೋಡು-ವಿಟ್ಲ ಹೆದ್ದಾರಿಯ ಸಾರಡ್ಕ ಎಂಬಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ಇದರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ.

ರಸ್ತೆಯನ್ನು ಬಂದ್ ಮಾಡಿ ತೆರವು ಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಗುಡ್ಡ ರಸ್ತೆಗೆ ಬಿದ್ದ ಕಾರಣ ರಸ್ತೆ ಸಂಚಾರದಲ್ಲಿ ಅಸ್ತವ್ಯಸ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News