ಹರೇಕಳ-ಇನೋಳಿ: ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಳ

Update: 2022-07-05 11:01 GMT

ಕೊಣಾಜೆ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ  ಭಾರೀ ಮಳೆಗೆ ನೇತ್ರಾವತಿ ನದಿಯ ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ಇನೋಳಿ, ಪಾವೂರು,  ಹರೇಕಳದ ನದಿ ತಟದ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ.

ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ  ಹರೇಕಳ ಕಡವಿನ ಬಳಿಯಲ್ಲಿ ನೀರು ತುಂಬಿ ಹರಿಯುತ್ತಿದ್ದು, ಈ ಭಾಗದಲ್ಲಿ ಕೃಷಿ ಜಮೀನು, ಗದ್ದೆ ತೋಟಗಳು ಜಲಾವೃತಗೊಂಡಿದೆ. ಇನೋಳಿ, ಪಾವೂರು ಪ್ರದೇಶಗಳಲ್ಲಿಯೂ ಗದ್ದೆ ತೋಟಗಳು, ತಗ್ಗು ಪ್ರದೇಶಗಳು ನೀರಿನಿಂದ ತುಂಬಿಕೊಂಡಿದೆ. 

ಹರೇಕಳದಿಂದ ಅಡ್ಯಾರ್ ಗೆ ಸಂಪರ್ಕಿಸುವ, ನೂತನವಾಗಿ ನಿರ್ಮಾಣವಾಗುತ್ತಿರುವ ಸೇತುವೆ ಹಾಗೂ ಅಣೆಕಟ್ಟು ಪ್ರದೇಶದಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಹರೇಕಳದಿಂದ ಅಡ್ಯಾರ್ ಗೆ ಇರುವ ದೋಣಿ ಸಂಚಾರ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ನೀರಿನ ಮಟ್ಟ‌ ಇನ್ನಷ್ಟು ಏರುವ ಸಂಭವವಿದ್ದು ನದಿ ತಟದ ಗ್ರಾಮಸ್ಥರು ಆತಂಕದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News