ಮಂಗಳೂರು; ಸೈಬರ್ ಜಾಲದ ಮೂಲಕ ವಿದ್ಯಾರ್ಥಿಗೆ ವಂಚನೆ: ದೂರು

Update: 2022-07-05 15:52 GMT

ಮಂಗಳೂರು : ಉಡುಗೊರೆ ಕಳುಹಿಸುವುದಾಗಿ ಹೇಳಿ ಅಪರಿಚಿತ ವ್ಯಕ್ತಿಯೊಬ್ಬ ಸೈಬರ್ ಜಾಲದ ಮೂಲಕ ಕಾಲೇಜು ವಿದ್ಯಾರ್ಥಿಗೆ ವಂಚಿಸಿದ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಖಾಸಗಿ ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗೆ ಅಪರಿಚಿತ ವ್ಯಕ್ತಿಯೋರ್ವ ಇನ್‌ಸ್ಟಾಗ್ರಾಂ ಮೂಲಕ ಡಾ. ಪ್ರಿನ್ಸ್ ಎಂಬ ಹೆಸರಿನಲ್ಲಿ ಪರಿಚಯಿಸಿಕೊಂಡ. ಬಳಿಕ ಆತ ತನ್ನ ವಾಟ್ಸಪ್ ಸಂಖ್ಯೆ +೪೪೭೪೪೮೦೬೫೪೦೭ ಮೂಲಕ ವಿದ್ಯಾರ್ಥಿಯ ಜೊತೆ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾಗಿದೆ.

ತಾನೊಂದು ಉಡುಗೊರೆ ಕಳುಹಿಸುವುದಾಗಿಯೂ ಅಪರಿಚಿತ ವ್ಯಕ್ತಿ ತಿಳಿಸಿದ್ದನಲ್ಲದೆ ಅದಕ್ಕಾಗಿ ಸೇವಾ ಶುಲ್ಕ ಪಾವತಿಸುವಂತೆ ಸೂಚಿಸಿದ. ಅದನ್ನು ನಂಬಿದ ವಿದ್ಯಾರ್ಥಿಯು ಮೇ 3ರಿಂದ ಮೇ 5ರ ಅವಧಿಯಲ್ಲಿ ಹಂತ ಹಂತವಾಗಿ 1.85 ಲ.ರೂ.ಗಳನ್ನು ಗೂಗಲ್ ಪೇ ಮೂಲಕ  8414996450 ಮತ್ತು 7431984087 ಸಂಖ್ಯೆಗೆ ಪಾವತಿಸಿದ್ದಾರೆ. ಆ ನಂತರ ಅಪರಿಚಿತ ವ್ಯಕ್ತಿಯು ಉಡುಗೊರೆಯನ್ನು ನೀಡದೆ ವಂಚಿಸಿದ್ದಾನೆ ಎಂದು ಪ್ರಕರಣ ದಾಖಲಿಸಿರುವ ಮಂಗಳೂರು ಸೆನ್ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News