ಕೇರಳ: ಸಂವಿಧಾನದ ವಿರುದ್ಧ ಹೇಳಿಕೆ ನೀಡಿದ್ದ ಸಿಪಿಎಂ ಶಾಸಕ ಸಾಜಿ ಚೆರಿಯನ್ ವಿರುದ್ಧ ಎಫ್‌ಐಆರ್

Update: 2022-07-07 06:56 GMT
Photo:twitter

ತಿರುವನಂತಪುರ: ಸಂವಿಧಾನದ ವಿರುದ್ಧ ಇತ್ತೀಚೆಗೆ ನೀಡಿರುವ ವಿವಾದಾತ್ಮಕ ಹೇಳಿಕೆಗಳಿಗೆ ಸಂಬಂಧಿಸಿದಂತೆ ಕೇರಳದ ಸಿಪಿಎಂ  ಶಾಸಕ ಸಾಜಿ ಚೆರಿಯನ್ ವಿರುದ್ಧ ಗುರುವಾರ ಎಫ್‌ಐಆರ್ ದಾಖಲಿಸಲಾಗಿದೆ.

 ತನ್ನ  ಹೇಳಿಕೆಗೆ ಪ್ರತಿಪಕ್ಷಗಳು ಸೇರಿದಂತೆ ವಿವಿಧ ವಲಯಗಳಿಂದ  ಟೀಕೆಗಳು ಕೇಳಿಬಂದ ಬಳಿಕ ಚೆರಿಯನ್ ಅವರು  ತಮ್ಮ ಸಂಪುಟ ಸ್ಥಾನಕ್ಕೆ ಬುಧವಾರ ರಾಜೀನಾಮೆ ಘೋಷಿಸಿದ್ದರು.

ಕೀಝ್ವೈಪುರ ಪೊಲೀಸ್ ಠಾಣೆಯಲ್ಲಿ ರಾಷ್ಟ್ರೀಯ ಗೌರವ ಅವಮಾನ ತಡೆ ಕಾಯ್ದೆಯ ಸೆಕ್ಷನ್ 2 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿ ಖಚಿತಪಡಿಸಿದ್ದಾರೆ.

ಕಾಯಿದೆಯಡಿಯಲ್ಲಿ ನಿಬಂಧನೆಯು ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ಒಳಗೊಂಡಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News