‘ಅಗ್ನಿಪಥ್’ ಯೋಜನೆ ಕುರಿತು ಸಂಸದೀಯ ಸಮಿತಿಗೆ ವಿವರಿಸಲಿರುವ ರಕ್ಷಣಾ ಸಚಿವ

Update: 2022-07-07 16:29 GMT

ಹೊಸದಿಲ್ಲಿ,ಜು.7: ಇತ್ತೀಚಿಗೆ ಘೋಷಿಸಲಾದ ‘ಅಗ್ನಿಪಥ್’ ನೇಮಕಾತಿ ಯೋಜನೆಯ ವಿವಿಧ ಅಂಶಗಳ ಬಗ್ಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಸೋಮವಾರ ಆಡಳಿತ ಮತ್ತು ಪ್ರತಿಪಕ್ಷಗಳ ಸಂಸದರನ್ನೊಳಗೊಂಡಿರುವ ರಕ್ಷಣೆ ಕುರಿತು ಸಂಸದೀಯ ಸಮಾಲೋಚನಾ ಸಮಿತಿಗೆ ವಿವರಿಸಲಿದ್ದಾರೆ.

ಮೂರೂ ಸಶಸ್ತ್ರ ಪಡೆಗಳ ವರಿಷ್ಠರು,ರಕ್ಷಣಾ ಕಾರ್ಯದರ್ಶಿ ಮತ್ತು ಇತರ ಹಿರಿಯ ಅಧಿಕಾರಿಗಳು ಸಹ ಸಭೆಯಲ್ಲಿ ಉಪಸ್ಥಿತರಿರುವ ಸಾಧ್ಯತೆಯಿದೆ ಎಂದು ರಕ್ಷಣಾ ಸಚಿವಾಲಯವು ತಿಳಿಸಿದೆ.
ಸಿಂಗ್ ಅಧ್ಯಕ್ಷತೆಯ ಸಮಿತಿಯು ಲೋಕಸಭೆಯ 13 ಮತ್ತು ರಾಜ್ಯಸಭೆಯ ಏಳು ಸೇರಿದಂತೆ 20 ಸದಸ್ಯರನ್ನು ಒಳಗೊಂಡಿದೆ.
 ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ,ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಮತ್ತು ಟಿಎಂಸಿ ನಾಯಕ ಸುದೀಪ್ ಬಂಡೋಪಾಧ್ಯಾಯ ಸೇರಿದಂತೆ ಹೆಚ್ಚುಕಡಿಮೆ ಎಲ್ಲ ಪಕ್ಷಗಳ ಸದಸ್ಯರು ಸಮಿತಿಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News