×
Ad

ಜು.9ರಂದು ಪಡುಬಿದ್ರಿ ಸಿಎ ಬ್ಯಾಂಕ್ ಸಿಟಿ ಶಾಖೆ ಉದ್ಘಾಟನೆ; ವಿವಿಧ ಸೇವೆಗಳ ಲೋಕಾರ್ಪಣೆ

Update: 2022-07-07 22:34 IST

ಪಡುಬಿದ್ರಿ: ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಇದರ ಪಡುಬಿದ್ರಿಯ ಬಸ್ಸು ನಿಲ್ದಾಣದ ಬಳಿಯ ಸಿಟಿ ಶಾಖೆಯ ನವೀಕೃತ ಹವಾನಿಯಂತ್ರಿತ ಕಟ್ಟಡ, ಕೃಷಿ ಸಲಕರಣೆಗಳ ಮಾರಾಟ ವಿಭಾಗ ಹಾಗೂ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯಗಳ ಉದ್ಘಾಟನೆ ಜುಲೈ 9ರಂದು ಶನಿವಾರ ಬೆಳಗ್ಗೆ 11ಗಂಟೆಗೆ ನಡೆಯಲಿದೆ.

ಗುರುವಾರ ಪಡುಬಿದ್ರಿಯ ಪ್ರಧಾನ ಕಚೇರಿಯಲ್ಲಿ ಕರೆದ ಸುದ್ಧಿಗೋಷ್ಟಿಯಲ್ಲಿ ಸೊಸೈಟಿಯ ಅಧ್ಯಕ್ಷ ವೈ ಸುಧೀರ್ ಕುಮಾರ್ ಮಾಹಿತಿ ನೀಡಿದರು.

ಸಿಟಿ ಶಾಖೆ ಪಡುಬಿದ್ರಿಯಲ್ಲಿ  ನೂತನವಾಗಿ ಚಿನ್ನಾಭರಣದ ಪರಿಶುದ್ದತೆಯನ್ನು ಪರಿಶೀಲಿಸುವ ಸೇವೆಯನ್ನು ಸಾರ್ವಜನಿಕರಿಗಾಗಿ ನೂತನವಾಗಿ ಸೊಸೈಟಿಯ ಪ್ರಧಾನ ಶಾಖೆ ಪಡುಬಿದ್ರಿಯಲ್ಲಿ ಪ್ರಾರಂಭಿಸಲಿದ್ದೇವೆ. ಸಭಾ ಕಾರ್ಯಕ್ರಮದಲ್ಲಿ ಸೊಸೈಟಿಯ ಕಾರ್ಯವ್ಯಾಪ್ತಿಯಲ್ಲಿ ಭತ್ತದ ಕೃಷಿ ಬೆಳೆಯುತ್ತಿರುವ 100ಕ್ಕೂ ಅಧಿಕ ಕೃಷಿಕರಿಗೆ “ಸಂಗಮ  ಕೃಷಿ ನಿಧಿ”ಯಿಂದ ಸಹಾಯಧನ ಹಸ್ತಾಂತರ ಯೋಜನೆ ಶುಭಾರಂಭಗೊಳ್ಳಲಿದೆ. ರಾಜ್ಯ ಸಹಕಾರ ಇಲಾಖೆಯ ನಿರ್ದೇಶನದಂತೆ ಏಕರೂಪದ ತಂತ್ರಾಂಶ ಅಳವಡಿಕೆಯ ಮೂಲಕ ಪಾರದರ್ಶಕ ಸೇವೆಯನ್ನು ಸೊಸೈಟಿಯ ನೀಡಲಿದೆ ಎಂದರು.

ನೂತನ ನವೀಕೃತ ಶಾಖೆಯ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ. ಬೆಂಗಳೂರು ಅಧ್ಯಕ್ಷ ಡಾ. ಎಮ್.ಎನ್. ರಾಜೇಂದ್ರಕುಮಾರ್, ಸಭಾಕಾರ್ಯಕ್ರಮವನ್ನು ಶಾಸಕ ಲಾಲಾಜಿ ಆರ್. ಮೆಂಡನ್ ಉದ್ಘಾಟಿಸಲಿದ್ದಾರೆ.  ಕೃಷಿ ಸಾಮಾಗ್ರಿಗಳ ಮಳಿಗೆ ಉದ್ಘಾಟನೆಯನ್ನು ಮಾಜಿ ಶಾಸಕ ವಿನಯ ಕುಮಾರ್ ಸೊರಕೆ, ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರಿನ ಸೌಲಭ್ಯದ ಲೋಕಾರ್ಪಣೆಯನ್ನು ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷ ರವಿ ಶೆಟ್ಟಿ, ಚಿನಾಭರಣದ ಶುದ್ದತೆ ಪರೀಕ್ಷಿಸುವ ಯಂತ್ರ ಉದ್ಘಾಟನೆಯನ್ನು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿ. ನಿರ್ದೇಶಕ ಬಿ. ಜಯಕರ್ ಶೆಟ್ಟಿ ಇಂದ್ರಾಳಿ ನೆರವೇರಿಸಲಿರುವರು.

ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಸೊಸೈಟಿಯ ಅಧ್ಯಕ್ಷ ವೈ ಸುಧೀರ್ ಕುಮಾರ್ ಇವರ ಅಧ್ಯಕ್ಷತೆ ವಹಿಸಲಿದ್ದಾರೆ. ಭತ್ತದ ಕೃಷಿಗೆ ಸಹಾಯಧನ ವಿತರಣೆಯನ್ನು ಉಡುಪಿ ಶಾಸಕ ಕೆ ರಘುಪತಿ ಭಟ್ ಮಾಡಲಿದ್ದಾರೆ. ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಲಕ್ಷೀನಾರಾಯಣ್ ಜಿ. ಎನ್), ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಲಾವಣ್ಯ ಕೆ. ಆರ್ ಭಾಗವಹಿಸಲಿದ್ದಾರೆ.

ಉಪಾಧ್ಯಕ್ಷ - ಗುರುರಾಜ್ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ - ನಿಶ್ಮಿತಾ ಪಿ. ಎಚ್, ನಿರ್ದೇಶಕರು - ಗಿರೀಶ್ ಪಲಿಮಾರು, ಶಿವರಾಮ ಎನ್ ಶೆಟ್ಟಿ, ವಾಸುದೇವ ದೇವಾಡಿಗ, ಮಾಧವ ಆಚಾರ್ಯ, ಸ್ಟ್ಯಾನಿ ಕ್ವಾಡ್ರಸ್ ಉಪಸ್ಥಿರಿದ್ದರು.

ಗ್ರಾಹಕರಿಗೆ ಹವಾನಿಯಂತ್ರಿತ ಶಾಖೆಯೊಂದಿಗೆ ಸೊಸೈಟಿಯಲ್ಲಿ ದೊರಕುತ್ತಿರುವ ವಿವಿಧ ಸೇವೆಗಳನ್ನು ಆಧುನೀಕರಣ ಗೊಳಿಸುವ ಸಲುವಾಗಿ ಸೊಸೈಟಿಯ ಹೃದಯ ಶಾಖೆಯಾದ ಸಿಟಿ ಶಾಖೆಯನ್ನು ಸಂಪೂರ್ಣ ಹವಾನಿಯಂತ್ರಿತ ಶಾಖೆಯನ್ನಾಗಿ ನವೀಕೃತ ಗೊಳಿಸಿ ಇದರೊಂದಿಗೆ ಕೃಷಿ ಸಲಕರಣೆ ಮಾರಾಟ ವಿಭಾಗದ ಉದ್ಘಾಟನೆಯನ್ನು ನವೀಕೃತ ಶಾಖೆಯ ಉದ್ಘಾಟನೆಯ ಸವಿನೆನಪಿಗಾಗಿ ಸಾರ್ವಜನಿಕರಿಗೆ ತಂಪಾದ ಶುದ್ದ ಕುಡಿಯುವ ನೀರಿನ ಸೌಲಭ್ಯದ ಲೋಕಾರ್ಪಣೆಯನ್ನು ಕೂಡ ನೇರೆವೇರಿಸಲಿದ್ದೇವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News