×
Ad

ಬೆಂಗಳೂರು ವಿವಿ ಪಠ್ಯಕ್ಕೆ ಫಾತಿಮಾ ರಲಿಯಾರ ಲೇಖನ ಆಯ್ಕೆ

Update: 2022-07-08 21:06 IST

ಮಂಗಳೂರು, ಜು.8: ಯುವ ಲೇಖಕಿ, ಕವಯತ್ರಿ ಫಾತಿಮಾ ರಲಿಯಾ ಹೆಜಮಾಡಿ ಅವರ ‘ಭರವಸೆ ಹುಟ್ಟಿಸಿದ ಚಿರು ಭಯ್ಯಾ ಎಂಬ ಕೂಗು’ ಲೇಖನವು ಬೆಂಗಳೂರು ವಿವಿಯ ಬಿಬಿಎ ಏವಿಯೇಶನ್ 2ನೆ ಸೆಮಿಸ್ಟರ್‌ಗೆ ಪಠ್ಯವಾಗಿ ಆಯ್ಕೆಯಾಗಿವೆ ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಮಂಡಳಿಯ ಸದಸ್ಯ ಸಂಚಾಲಕ ಡಾ. ರಾಮಲಿಂಗಪ್ಪ ಟಿ. ಬೇಗೂರು ತಿಳಿಸಿದ್ದಾರೆ.

ಚಂದ್ರಕಾಂತ ವಡ್ಡು ಸಂಪಾದಿಸಿದ ‘ಸೌಹಾರ್ದ ಕರ್ನಾಟಕ- ಈ ಹೊತ್ತು, ಒಂದು ಸುತ್ತು!’ ಎಂಬ ಕೃತಿಯಲ್ಲಿ ಈ ಲೇಖನ ಪ್ರಕಟವಾಗಿತ್ತು.

ಉಪ್ಪಿನಂಗಡಿ ಸಮೀಪದ ಪೆರ್ನೆಯ ಎಂಬಿಎ ಪದವೀಧರೆ ಫಾತಿಮಾ ರಲಿಯಾ ಅವರ ‘ಕಡಲು ನೋಡಲು ಹೋದವಳು’ ಲಲಿತ ಪ್ರಬಂಧಗಳ ಸಂಕಲನವನ್ನು ಶಿವಮೊಗ್ಗದ ಅಹರ್ನಿಶಿ ಪ್ರಕಾಶನ ಇತ್ತೀಚೆಗೆ ಪ್ರಕಟಿಸಿತ್ತು. ಇವರು ಅಬ್ದುಲ್ ಅಜೀಜ್ ಹೆಜಮಾಡಿಯವರ ಪತ್ನಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News