ಬೇಡಿಕೆಗಳ ಈಡೇರಿಕೆಗಾಗಿ ಡಿವೈಎಫ್ಐ ಮುಡಿಪು ಘಟಕದ ನೇತೃತ್ವದಲ್ಲಿ ಬಾಳೆಪುಣಿ ಗ್ರಾಮ ಪಂಚಾಯತ್ ಗೆ ಮನವಿ
Update: 2022-07-08 23:24 IST
ಬಾಳೆಪುಣಿ: ಬಾಳೆಪುಣಿ ಗ್ರಾಮದ ಕುಕ್ಕುದ ಕಟ್ಟೆಯಲ್ಲಿ ನೀರು ತುಂಬಿ ಮನೆ ಆಗೂ ಜನ ಸಂಚಾರಕ್ಕೆ ತೊಂದರೆ ಆಗುತ್ತಿರುವ ಬಗ್ಗೆ ಶಾಶ್ವತ ಪರಿಹಾರಕ್ಕೆ ಇಂದು ಡಿವೈಎಫ್ಐ ಮುಡಿಪು ಘಟಕದ ನೇತೃತ್ವದಲ್ಲಿ ನಾಗರಿಕರ ಜೊತೆ ಬಾಳೆಪುಣಿ ಗ್ರಾಮ ಪಂಚಾಯತ್ PDO ಮತ್ತು ಅಧ್ಯಕ್ಷರಿಗೆ ಮನವಿಯನ್ನು ನೀಡಲಾಯಿತು.
ನಿಯೋಗದಲ್ಲಿ ಡಿವೈಎಫ್ಐ ಉಳ್ಳಾಲ ವಲಯ ಮುಖಂಡ ರಝಾಕ್ ಮುಡಿಪು, ಮುಡಿಪು ಘಟಕದ ಅಧ್ಯಕ್ಷರಾದ ಶಾಫಿ ಮುಡಿಪು, ಕಾರ್ಯದರ್ಶಿ ಅಖ್ತರ್ ಮುಡಿಪು ಮತ್ತು ನಾಗರಿಕರು ಜೊತೆಗಿದ್ದರು.