ಮಂಗಳೂರು: ಕಾಂಗ್ರೆಸ್ ಸೇವಾದಳ ವತಿಯಿಂದ ವನಮಹೋತ್ಸವ
ಮಂಗಳೂರು: ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸೇವಾದಳ ಮತ್ತು ನಗರ ಬ್ಲಾಕ್ ಕಾಂಗ್ರೆಸ್ ಸೇವಾದಳ ಸಮಿತಿಗಳ ವತಿಯಿಂದ ಇಂದುನಮಂಗಳೂರಿನ ನೆಹರೂ ಮೈದಾನದಲ್ಲಿರುವ ನೆಹರೂ ಪ್ರತಿಮೆಯ ಪಾರ್ಕ್ ನಲ್ಲಿ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಜೆ. ಆರ್. ಲೋಬೊ ಮಾತನಾಡುತ್ತ, ಸ್ವಾತಂತ್ರ ಹೋರಾಟಗಾರರಾದ ಡಾ. ನಾ. ಸು. ಹರ್ಡಿಕರ್ ರವರು ಯುವಕರಿಗೆ ಶಿಸ್ತಿಗೆ ಪ್ರಾಮುಖ್ಯತೆ ನೀಡಿ ಸೇವಾದಳವನ್ನು ಪ್ರಾರಂಭ ಮಾಡಿದರು. ಶಿಸ್ತಿನ ಮೂಲಕ ಪಕ್ಷ ಸಂಘಟನೆಗೆ ಹೆಚ್ಚು ಒತ್ತುಕೊಡಬೇಕು. ಶಿಸ್ತಿನ್ನು ನಮ್ಮ ಜೀವನದಲ್ಲಿ ಪ್ರತಿ ಹಂತದಲ್ಲಿಯೂ ಅಳವಡಿಸಬೇಕು. ಇಂದಿನ ವನಮಹೋತ್ಸವ ಮೂಲಕ ಹಲವಾರು ಜನಸ್ಪಂದನ ಕಾರ್ಯಕ್ರಮಗಳನ್ನು ಪ್ರಾರಂಭಿಸಲಿದ್ದೇವೆ. ವಿಧಾನಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ರವರು ತಮ್ಮ ಅನುದಾನದ ನಿಧಿಯಿಂದ ಒಂದು ಲಕ್ಷ ರೂಪಾಯಿ ಯನ್ನು ಈ ನೆಹರೂ ಪಾರ್ಕ್ ಅಭಿವೃದ್ಧಿಗೆ ಈಗಾಗಲೇ ಘೋಷಣೆ ಮಾಡಿದ್ದಾರೆ ಎಂದರು.
ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಎಂಎಲ್ ಸಿ ಐವನ್ ಡಿಸೋಜಾ ಮಾತನಾಡಿ, ಸೇವಾದಳಕ್ಕೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಡಬೇಕು. ಕಾಂಗ್ರೆಸ್ ಪಕ್ಷ ಸೇವಾದಳದ ಕ್ಯಾಂಪ್ ನಡೆಸಲು ಉತ್ತೇಜನ ನೀಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸೇವಾದಳ ಜಿಲ್ಲಾಧ್ಯಕ್ಷ ಜೋಕಿಂ ಡಿಸೋಜಾ, ಬ್ಲಾಕ್ ಅಧ್ಯಕ್ಷರಾದ ಅಬ್ದುಲ್ ಸಲಿಂ, ಪ್ರಕಾಶ್ ಸಾಲ್ಯಾನ್, ಸೇವಾದಳದ ಕ್ಷೇತ್ರ ಅಧ್ಯಕ್ಷ ಉದಯ ಕುಂದರ್, ಬ್ಲಾಕ್ ಅಧ್ಯಕ್ಷ ಹುಸೈನ್ ಪಾದೆಕಲ್, ಸದಾನಂದ, ಮಾಜಿ ಮೇಯರ್ ಮಹಾಬಲ ಮಾರ್ಲ, ಸೇವಾದಳ ರಾಜ್ಯ ಸಂಘಟಕ ಪ್ರಭಾಕರ್ ಶ್ರೀಯಾನ್, ಕಾರ್ಪೋರೇಟರ್ ಕೇಶವ ಮರೋಳಿ, ಟಿ.ಕೆ ಸುಧೀರ್, ಶುಭೋದಯ ಆಳ್ವ,ನೀರಜ್ ಪಾಲ್,ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸುನೀಲ್ ಪೂಜಾರಿ, ರಾಕೇಶ್ ದೇವಾಡಿಗ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಶಾಂತಲ ಗಟ್ಟಿ, ವಿಜಯಲಕ್ಷ್ಮೀ, ಶಶಿಕಲಾ, ಚೇತನ್, ಗಿರೀಶ್ ಶೆಟ್ಟಿ, ರಮಾನಂದ್, ಡೆನಿಸ್ ಡಿಸಿಲ್ವ, ದಿನೇಶ್ ರಾವ್, ಮಂಜುಳಾ ನಾಯಕ್, ಸಮರ್ಥ ಭಟ್, ಗಣೇಶ ಉರ್ವಾ, ಪದ್ಮನಾಭ ಅಮೀನ್, ಯೋಗೇಶ್ ನಾಯಕ್, ಭಾಸ್ಕರ್ ರಾವ್,ಕೃಷ್ಣ ಶೆಟ್ಟಿ, ರೂಪ ಚೇತನ್, ಸದಾಶಿವ್ ಕುಲಾಲ್, ಪ್ರೇಮ್, ಶಾನ್ ಡಿಸೋಜಾ, ಗೀತಾ ಪ್ರವೀಣ್, ಜಯರಾಜ್, ಜೇಮ್ಸ್ ಪ್ರವೀಣ್, ಹೈದರ್ ಆಲಿ, ವಿದ್ಯಾ,ಮೊದಲಾದವರು ಉಪಸ್ಥಿತರಿದ್ದರು.