ಸಂಪಾಜೆ: ಮತ್ತೆ ಕಂಪಿಸಿದ ಭೂಮಿ
Update: 2022-07-11 17:34 IST
ಸುಳ್ಯ: ಸಂಪಾಜೆ, ಚೆಂಬೂ, ಅರಂತೋಡು, ಗೂನಡ್ಕ, ತೊಡಿಕಾಣ ಈ ಭಾಗಗಳಲ್ಲಿ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಈ ಬಗ್ಗೆ ತಹಶೀಲ್ದಾರ್ ಅವರಿಗೆ ಮಾಹಿತಿ ನೀಡಲಾಗಿದ್ದು, ರಿಕ್ಟರ್ ಮಾಪಕದಲ್ಲಿ ಪರಿಶೀಲಿಸಿ ಕಂಪಿಸಿದ ತೀವ್ರತೆಯನ್ನು ತಿಳಿಸಲಿದ್ದಾರೆ ಎಂದು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ.ಕೆ. ಹಮೀದ್ ಅವರು ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ.