×
Ad

ಜುಗಾರಿ ಆಟವಾಡುತ್ತಿದ್ದ 28 ಮಂದಿಯ ಸೆರೆ

Update: 2022-07-12 21:44 IST

ಮಂಗಳೂರು, ಜು.೧೨: ನಗರದ ರಾವ್ ಆ್ಯಂಡ್ ರಾವ್ ಸರ್ಕಲ್ ಸಮೀಪದ ರಿಕ್ರಿಯೇಷನ್ ಕ್ಲಬ್‌ವೊಂದರಲ್ಲಿ ಅಂದರ್-ಬಾಹರ್ ಜುಗಾರಿ ಆಟವಾಡುತ್ತಿದ್ದ ಆರೋಪದ ಮೇರೆಗೆ ೨೮ ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸಿಸಿಬಿ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸಿ ೧.೦೩ ಲ.ರೂ. ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News