ಕಣಚೂರು ಶಾಲೆಯಲ್ಲಿ ಸ್ಥಾಪಕ ದಿನಾಚರಣೆ

Update: 2022-07-13 09:18 GMT

ದೇರಳಕಟ್ಟೆ:  ಕಣ್ಣೂರು ಶಿಕ್ಷಣ ಸಂಸ್ಥೆ ಆರಂಭಗೊಂಡಿದ್ದು ಸ್ವಾಗತಾರ್ಹ. ಕಣಚೂರು ಮೋನು 2001 ರಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಇದು ವ್ಯವಹಾರ ದೃಷ್ಟಿಯಿಂದ ಆರಂಭಿಸಿದ್ದಲ್ಲ. ಎಲ್ ಕೆ ಜಿ ಯಿಂದ ಆರಂಭ ಗೊಂಡ ಕಣಚೂರು ಶಿಕ್ಷಣ ಸಂಸ್ಥೆ ವೈದ್ಯಕೀಯ ಶಿಕ್ಷಣ ವರೆಗೆ ಬೆಳೆದಿದೆ. ಇದಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಬೇಕು ಎಂದು ಕಣ್ಣೂರು ಹಾಗೂ ಕ್ಯಾಲಿಕಟ್ ವಿವಿ ವಿಶ್ರಾಂತ ಉಪಕುಲಪತಿ ಅಬ್ದುಲ್ ರಹಿಮಾನ್ ಕಣ್ಣೂರು  ಹೇಳಿದರು.

ಅವರು ಕಣಚೂರು ಇಸ್ಲಾಮಿಕ್ ಎಜುಕೇಶನಲ್ ಟ್ರಸ್ಟ್ ಇದರ ಆಶ್ರಯದಲ್ಲಿ ಕಣಚೂರು ಶಾಲೆಯಲ್ಲಿ ನಡೆದ ಸ್ಥಾಪಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ಕಣಚೂರು ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಕೇಂದ್ರ ದ ಚಯರ್ ಮ್ಯಾನ್ ಕಣಚೂರು ಮೋನು ಹಾಜಿ ಮಾತನಾಡಿ, ಪ್ರತಿ ಮನುಷ್ಯನಿಗೂ ಆಶೆ ಆಕಾಂಕ್ಷೆಗಳು ಇರುತ್ತದೆ. ಇದಕ್ಕೆ ಪೂರಕವಾಗಿ ಇರುವುದು ಶಿಕ್ಷಣ. ವಿದ್ಯಾರ್ಥಿಗಳಿಗೂ ಕೆಲವು ಆಸೆ ಆಕಾಂಕ್ಷೆ ಇರುತ್ತದೆ. ಇದರಲ್ಲಿ ಸ್ಥಾಪಕ ದಿನಾಚರಣೆ ಒಂದಾಗಿದೆ. ಈ ಸಂಸ್ಥೆ ನನ್ನದು ಎಂದು ಭಾವಿಸುವುದು ಬೇಡ. ಈ ಸಂಸ್ಥೆ ಸಮಾಜಕ್ಕೆ ಸೇರಿದೆ. ಈ ಭೂಮಿ ಇರುವವರೆಗೆ ಶಿಕ್ಷಣ ಹೆಮ್ಮರ ವಾಗಿ ಬೆಳೆದು ನಿಲ್ಲುತ್ತದೆ. ಇದು ಈ ಸಂಸ್ಥೆ ಹುಟ್ಟಿದ ನೆನಪಿಗಾಗಿ ಈ ಕಾರ್ಯಕ್ರಮ ನಡೆಸಲಾಗುತ್ತದೆ ಎಂದರು.

ಡಾ.ಇಫ್ತಿಕರ್ ಅಲಿ, ಡಾ.ವಿರೂಪಾಕ್ಷ, ಮಾತನಾಡಿದರು. ಈ ಕಾರ್ಯಕ್ರಮದ ಪ್ರಯುಕ್ತ ರಕ್ತದಾನ ಶಿಬಿರ ಹಾಗೂ ಶಾಲಾ ವಠಾರದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಟ್ರಸ್ಟಿ ಗಳಾದ ಝೊಹರ ಮೋನು,‌ ಫರೀದ ನಾಸೀರ್, ಉಮಯ್ಯ ಭಾನು ಆರೀಫ್, ಡಾ.ಆಬಿದಾ ಹಾಸಿಂ, ಕಣ್ಣೂರು ಹಾಗೂ ಕ್ಯಾಲಿಕಟ್ ವಿವಿ ವಿಶ್ರಾಂತ ಉಪ ಕುಲಪತಿ ಅಬ್ದುಲ್ ರಹಿಮಾನ್ ಕಣ್ಣೂರು, ಡಾ.ರೋಹನ್ ಮೊನ್ನೀಸ್, ಹರೀಶ್ ಶೆಟ್ಟಿ, ವಿರೂಪಾಕ್ಷ, ಮುಹಮ್ಮದ್ ಸುಹೈಲ್, ಮೋಲಿ ಸಲ್ದಾನ, ಮನೀಶ್ ಶೆಟ್ಟಿ,  ಪಿ.ಯು.ಕಾಲೇಜು ಪ್ರಾಂಶುಪಾಲ ಶಹದಾ, ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲ ವಿಮಲಾ ಶೆಟ್ಟಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಲಿನೆಟ್ ಡಿಸೋಜ ಉಪಸ್ಥಿತರಿದ್ದರು.

ಕಣಚೂರು ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ನಿರ್ದೆಶಕ ಅಬ್ದುಲ್ ರಹಿಮಾನ್ ಸ್ವಾಗತಿಸಿದರು. ಉಪನ್ಯಾಸಕಿ ಮುಬೀನ್ ತಾಜ್ ನಿರೂಪಿಸಿದರು. ಕಣಚೂರು ಪದವಿ ಕಾಲೇಜು ಪ್ರಾಂಶುಪಾಲ ಇಕ್ಬಾಲ್ ಅಹಮದ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News