ಜನವಾದಿ ಮಹಿಳಾ ಸಂಘಟನೆಯ ದ.ಕ.ಜಿಲ್ಲಾ ಸಮಾವೇಶ

Update: 2022-07-18 15:54 GMT

ಮಂಗಳೂರು, ಜು.18: ಜನವಾದಿ ಮಹಿಳಾ ಸಂಘಟನೆ (ಜೆಎಂಎಸ್)ಯ ದ.ಕ,ಜಿಲ್ಲಾ ಸಮ್ಮೇಳನವು ಬಜಾಲ್ ಪಕ್ಕಲಡ್ಕದಲ್ಲಿ ರವಿವಾರ ನಡೆಯಿತು.

ಸಮಾವೇಶ ಉದ್ಘಾಟಿಸಿ ಮಾತನಾಡಿದ ಜೆಎಂಎಸ್ ರಾಜ್ಯಾಧ್ಯಕ್ಷೆ ದೇವಿ ದೇಶವ್ಯಾಪಿಯಾಗಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಲಿದೆ. ಮಹಿಳೆಯರಿಗೆ ರಕ್ಷಣೆಯೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಸಂವಿಧಾನ ಬದ್ಧವಾದ ಪ್ರಜಾಪ್ರಭುತ್ವ ಹಕ್ಕುಗಳ ಪರ ಅಥವಾ ಅನ್ಯಾಯದ ವಿರುದ್ಧ ಧ್ವನಿ ಎತ್ತಿದರೆ ಪ್ರಕರಣ ದಾಖಲಿಸಿ ಜೈಲಿಗಟ್ಟಲಾಗುತ್ತದೆ. ಇದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದರು.

ಆಳುವ ವರ್ಗಗಳು ಮಹಿಳೆಯರಿಗೆ ಸಂಸದೀಯ ಮೀಸಲಾತಿಯನ್ನು ನೀಡಲು ಹಿಂದೇಟು ಹಾಕುವ ಮೂಲಕ ಮಹಿಳೆಯರನ್ನು ಮೂಲೆಗೆ ತಳ್ಳುವ ಕೆಲಸ ಮಾಡುತ್ತಿದೆ. ಜನವಾದಿ ಮಹಿಳಾ ಸಂಘಟನೆಯು ಸಾಮೂಹಿಕವಾಗಿ ಎಲ್ಲಾ ವರ್ಗದ ಮಹಿಳೆಯರ ಪರ ಧ್ವನಿಯಾಗಿ ಕೆಲಸ ಮಾಡುತ್ತಿದೆ ಎಂದು ದೇವಿ ನುಡಿದರು.

ಜೆಎಂಎಸ್ ದ.ಕ.ಜಿಲ್ಲಾಧ್ಯಕ್ಷೆ ಜಯಂತಿ ಬಿ.ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಿಐಟಿಯು ನಾಯಕ ವಸಂತ ಆಚಾರಿ, ಕರ್ನಾಟಕ ಪ್ರಾಂತ ರೈತ ಸಂಘದ ನಾಯಕ ಕೆ,ಯಾದವ ಶೆಟ್ಟಿ ಮಾತನಾಡಿದರು.

ವೇದಿಕೆಯಲ್ಲಿ ಜಿಲ್ಲಾ ನಾಯಕಿಯರಾದ ರಮಣಿ, ಪದ್ಮಾವತಿ ಶೆಟ್ಟಿ, ಸುಖನ್ಯಾ, ವಿಲಾಸಿನಿ, ಜಯಲಕ್ಷ್ಮಿ, ಭಾರತಿ ಬೋಳಾರ್, ರಾಧಾ ಮೂಡುಬಿದಿರೆ ಉಪಸ್ಥಿತರಿದ್ದರು. ಆಶಾ ಬೆಳ್ತಂಗಡಿ ಕಾರ್ಯಕ್ರಮ ನಿರೂಪಿಸಿದರು.

*ನಿರುದ್ಯೋಗದ ಸಮಸ್ಯೆ, ಬೆಲೆ ಏರಿಕೆ, ಪಠ್ಯ ಪುಸ್ತಕ ಪರಿಷ್ಕರಣೆ, ಲಿಂಗತಾರತಮ್ಯದ ವಿರುದ್ಧ ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ, ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡರ ಬಂಧನಕ್ಕೆ ಖಂಡನೆ, ಅಗ್ನಿಪಥ್ ಗುತ್ತಿಗೆ ಆಧಾರಿತ ಸೈನ್ಯದ ನೇಮಕಾತಿಯ ವಿರುದ್ಧದ ಬಗ್ಗೆ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಯಿತು.

*ಜೆಎಂಎಸ್ ಅಧ್ಯಕ್ಷರಾಗಿ ಜಯಂತಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಭಾರತಿ ಬೋಳಾರ್, ಖಜಾಂಚಿಯಾಗಿ ರಾಧಾ ಮೂಡುಬಿದಿರೆ, ಉಪಾಧ್ಯಕ್ಷರಾಗಿ ಲಕ್ಷ್ಮಿ, ಜೊತೆ ಕಾರ್ಯದರ್ಶಿಗಳಾಗಿ ವಿಲಾಸಿನಿ, ಪ್ರಮೀಳಾ ಶಕ್ತಿನಗರ ಹಾಗೂ 19 ಮಂದಿಯ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News